alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ವಿರುದ್ಧ ಭರ್ಜರಿ ಜಯಗಳಿಸಿದ ಕರ್ನಾಟಕ

ನಾಗ್ಪುರ: ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ, ಮುಂಬೈ ಎದುರು ಕರ್ನಾಟಕ ತಂಡ ಭರ್ಜರಿ ಜಯಗಳಿಸಿದೆ.

ಇನ್ನಿಂಗ್ಸ್ ಹಾಗೂ 20 ರನ್ ಅಂತರದಿಂದ ಜಯಗಳಿಸಿರುವ ವಿನಯ್ ಕುಮಾರ್ ಪಡೆ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಮುಂಬೈ ಮೊದಲ ಇನ್ನಿಂಗ್ಸ್ ನಲ್ಲಿ 173 ರನ್ ಗಳಿಸಿದ್ದು, ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 570 ರನ್ ಗಳಿಸಿತ್ತು.

ನಿನ್ನೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದ್ದ ಮುಂಬೈ, ಇಂದು ಆಟ ಮುಂದುವರೆಸಿ 377 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ನಿನ್ನೆ 55 ರನ್ ಗಳಿಸಿದ್ದ ಮುಂಬೈ ಆಟಗಾರ ಸೂರ್ಯಕುಮಾರ್ ಇಂದು ಆಟ ಮುಂದುವರೆಸಿ, 108 ರನ್ ಗಳಿಸಿದ್ದಾರೆ. ಕರ್ನಾಟಕದ ಪರ ಗೌತಮ್ 6, ವಿನಯ್ ಕುಮಾರ್ 2 ವಿಕೆಟ್ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...