alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ಎರಡೇ 2 ರನ್ ಗೆ ಇಡೀ ತಂಡವೇ ಆಲೌಟ್

ಏಕದಿನ ಪಂದ್ಯವೊಂದರಲ್ಲಿ ಕೇವಲ ಎರಡೇ 2 ರನ್ ಗಳಿಗೆ ಇಡೀ ತಂಡವೇ ಆಲ್ ಔಟ್ ಆಗಿದೆ. ಗುಂಟೂರಿನ ಜೆ.ಕೆ.ಸಿ. ಕಾಲೇಜ್ ಮೈದಾನದಲ್ಲಿ ನಡೆದ ಅಂಡರ್ -19 ಮಹಿಳೆಯರ ಕ್ರಿಕೆಟ್ ಪಂದ್ಯದಲ್ಲಿ ನಾಗಾಲ್ಯಾಂಡ್ ತಂಡ 2 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ಕೇರಳ ವಿರುದ್ಧ ನಡೆದ ಪಂದ್ಯದಲ್ಲಿ ನಾಗಾಲ್ಯಾಂಡ್ ಯುವತಿಯರು 2 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಕ್ರಿಕೆಟ್ ನಲ್ಲಿ ಅಪರೂಪದ ಪಂದ್ಯವೊಂದು ನಡೆದಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ನಾಗಾಲ್ಯಾಂಡ್ 17 ಓವರ್ ಗಳನ್ನಾಡಿದ್ದು, 2 ರನ್ ಗಳನ್ನು ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಮೇನಕಾ 18 ಎಸೆತಗಳಲ್ಲಿ 1 ರನ್ ಗಳಿಸಿದ್ದಾರೆ. ಮತ್ತೊಂದು ರನ್ ಬಂದಿದ್ದು ವೈಡ್ ಬಾಲ್ ನಿಂದಾಗಿ. ಉಳಿದವರು ಶೂನ್ಯಕ್ಕೆ ಔಟಾಗಿದ್ದಾರೆ. ಕೇರಳ ಪರ ವಿನ್ನು ಮಣಿ 4 ವಿಕೆಟ್ ಪಡೆದಿದ್ದಾರೆ.

2 ರನ್ ಗೆಲುವಿನ ಗುರಿ ಪಡೆದ ಕೇರಳ ತಂಡ ಒಂದೇ ಒಂದು ಬಾಲ್ ನಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಅನ್ಸು ಎಸ್. ರಾಜು ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ್ದಾರೆ. ಪರಿಣಾಮ 49.5 ಓವರ್ ಬಾಕಿ ಇರುವಂತೆಯೇ 10 ವಿಕೆಟ್ ಅಂತರದಿಂದ ಕೇರಳ ತಂಡ ಜಯಗಳಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...