alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀನಿವಾಸನ್ ಗೆ ಬಿಸಿ ಮುಟ್ಟಿಸಿದೆ ಸುಪ್ರೀಂ ಕೋರ್ಟ್

n-srinivasan-afp_806x605_71498387143

ಬಿಸಿಸಿಐ ಸಭೆಗಳಲ್ಲಿ ಭಾಗವಹಿಸದಂತೆ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಗೆ ನಿಷೇಧ ಹೇರಿದೆ. ಲೋಧಾ ಸಮಿತಿ ಶಿಫಾರಸು ಜಾರಿಗೆ ನೇಮಕವಾಗಿರುವ ವಿಶೇಷ ಸಮಿತಿ ಸದಸ್ಯ ನಿರಂಜನ್ ಶಾ ಅವರಿಗೆ ಕೂಡ ಬಿಸಿಸಿಐ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಿದೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ದಂಧೆಯಲ್ಲಿ ಶ್ರೀನಿವಾಸನ್ ಹೆಸರು ಕೇಳಿಬಂದಿತ್ತು. ನಂತರ ಅವರು ಬಿಸಿಸಿಐ ಅಧ್ಯಕ್ಷ ಹುದ್ದೆ ತ್ಯಜಿಸಿದ್ದರು. 70 ವರ್ಷಕ್ಕೂ ಮೇಲ್ಪಟ್ಟ ಯಾವುದೇ ಅಧಿಕಾರಿಗಳು ಬಿಸಿಸಿಐ ಸಭೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಅಂತಾ ಲೋಧಾ ಸಮಿತಿ ಕಟ್ಟಪ್ಪಣೆ ಮಾಡಿತ್ತು.

ಆದ್ರೆ ಶ್ರೀನಿವಾಸನ್ ಆ ನಿಯಮವನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಇನ್ಮುಂದೆ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸುಪ್ರೀಂ ಕೋರ್ಟ್ ಅವರಿಗೆ ನಿಷೇಧ ಹೇರಿದೆ. ನ್ಯಾಯಾಲಯದ ಆದೇಶದನ್ವಯ ಶ್ರೀನಿವಾಸನ್, ಜುಲೈ 26ರಂದು ನಡೆಯುವ ಬಿಸಿಸಿಐ ಸ್ಪೆಷಲ್ ಜನರಲ್ ಮೀಟಿಂಗ್ ನಲ್ಲಿ ಭಾಗವಹಿಸುವಂತಿಲ್ಲ.

ಜುಲೈ 26ರ ಸಭೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನೆಲ್ಲ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಎಷ್ಟು ಜನರ ಸಮ್ಮತಿ ಇದೆ ಅನ್ನೋದನ್ನು ಕೂಡ ಪರಿಶೀಲಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...