alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳ ಜೊತೆಗಿನ ‘ಸಂವಾದ’ದಲ್ಲಿ ತಮ್ಮ ಕನಸು ಬಿಚ್ಚಿಟ್ಟ ಮಿಲ್ಖಾ ಸಿಂಗ್‌

ನಾನು ರೋಮ್‌ನಲ್ಲಿ ಕಳಕೊಂಡ ಚಿನ್ನದ ಪದಕವನ್ನು ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತೀಯ ಅಥ್ಲೀಟ್ ಒಬ್ಬರು ಗೆಲ್ಲುವುದನ್ನು ಕಣ್ಣಾರೆ ನೋಡಬೇಕು, ಇದೇ ನನ್ನ ಕನಸು: ಹೀಗೆಂದವರು ಭಾರತೀಯ ಅಥ್ಲೆಟಿಕ್ಸ್ ನ ದಂತಕಥೆ ಮಿಲ್ಖಾ ಸಿಂಗ್.

ಹಿಮಾಚಲ ಪ್ರದೇಶದ ಶೂಲಿನಿ ಯುನಿವರ್ಸಿಟಿಯ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಾ ಮಿಲ್ಖಾ ಸಿಂಗ್ ಅವರು ತಮ್ಮ ಕನಸು ಬಿಚ್ಚಿಟ್ಟರು. ತಮ್ಮ ಬಯೋಪಿಕ್ ‘ಭಾಗ್ ಮಿಲ್ಖಾ ಭಾಗ್‌’ನ ದೃಶ್ಯವನ್ನು ವಿದ್ಯಾರ್ಥಿಗಳೊಂದಿಗೆ ವೀಕ್ಷಿಸುತ್ತಿದ್ದಂತೆ ಭಾವುಕಗೊಂಡ ಹಾರುವ ಸಿಖ್ ಎಂದೇ ಖ್ಯಾತರಾಗಿರುವ ಮಿಲ್ಖಾ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಬಾಲ್ಯದ ಹೋರಾಟದ ದಿನಗಳು, ಪಾಕಿಸ್ತಾನದಲ್ಲಿ 1960ರಲ್ಲಿ ನಡೆದ ಪ್ರಸಿದ್ಧ ಕ್ರೀಡಾಕೂಟದಲ್ಲಿ ತಮ್ಮ ಪಾಕ್ ಎದುರಾಳಿ ಅಬ್ದುಲ್ ಖಾಲೀಖ್ ಅವರನ್ನು ಸೋಲಿಸಿದ ಅನುಭವಗಳನ್ನೆಲ್ಲಾ ಮಿಲ್ಖಾ ಸಿಂಗ್ ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

“ಯಾರೇ ಪ್ರಧಾನಿಯಾದರೂ ದೇಶದಿಂದ ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ನಾಗರಿಕರಾದ ನಾವು ಬಡತನ ನಿರ್ಮೂಲನೆಯತ್ತ ಹಾಗೂ ದೇಶದ ಅಭಿವೃದ್ಧಿಗಾಗಿ ನಮ್ಮ ಸಣ್ಣ ಕಾಣಿಕೆಯನ್ನು ನೀಡಬೇಕು” ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಯುನಿವರ್ಸಿಟಿಯಲ್ಲಿ ನಿರ್ಮಿಸಿದ ಮಿಲ್ಖಾ ಸಿಂಗ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...