alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರೊಂದೇ ಅಲ್ಲ ಪ್ರಾಣಿಗಳ ನೆರವಿಗೂ ನಿಂತ ವಿರುಷ್ಕಾ

ಪ್ರವಾಹದಿಂದಾಗಿ ಕೇರಳಿಗರ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಮುಂದೆ ಬಂದಿದೆ. ಅನೇಕ ಖ್ಯಾತನಾಮರು ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದ್ರ ಜೊತೆ ಪ್ರವಾಹದಿಂದ ತತ್ತರಿಸಿರುವ ಪ್ರಾಣಿಗಳ ಬಗ್ಗೆಯೂ ಕೆಲ ಸೆಲೆಬ್ರಿಟಿಗಳು ಕಾಳಜಿ ವಹಿಸುತ್ತಿದ್ದಾರೆ.

ಪ್ರಾಣಿಗಳ ಸಹಾಯಕ್ಕೆ ನಿಂತ ಸೆಲೆಬ್ರಿಟಿಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ವಿರುಷ್ಕಾ ಟ್ರಕ್ ಒಂದನ್ನು ಸ್ಪಾನ್ಸರ್ ಮಾಡಿದ್ದಾರಂತೆ. ಪ್ರಾಣಿಗಳಿಗೆ ಆಹಾರ ಹಾಗೂ ಔಷಧಿ ನೀಡಲು ಇದನ್ನು ಬಳಸಿಕೊಳ್ಳಲಾಗ್ತಿದೆಯಂತೆ. ಕೇರಳದ ಸ್ಥಳೀಯ ಎನ್ಜಿಒ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಎನ್ಜಿಒ 8 ರಕ್ಷಣಾ ಜನರ ತಂಡವನ್ನು ಪ್ರಾಣಿಗಳ ರಕ್ಷಣೆಗೆ ಕಳುಹಿಸಿದೆಯಂತೆ.

ಕೇರಳದ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ಆದಷ್ಟು ಬೇಗ ಸಹಾಯ ಸಿಗಲಿ ಎನ್ನವುದು ವಿರುಷ್ಕಾ ಬಯಕೆಯಂತೆ. ಈಗಾಗಲೇ ಕೆಲ ಪ್ರಾಣಿಗಳ ರಕ್ಷಣೆ ಕಾರ್ಯ ನಡೆದಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...