alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮಶಾಲೆಯಲ್ಲಿ ಶುರುವಾಗಲಿದೆ ಕ್ರಿಕೆಟ್ ಮ್ಯೂಸಿಯಂ

ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾದ ಧರ್ಮಶಾಲೆಯಲ್ಲಿ ಕ್ರಿಕೆಟ್ ಮ್ಯೂಸಿಯಂ ತೆರೆಯಲು ನಿರ್ಧರಿಸಲಾಗಿದೆ. ಕ್ರಿಕೆಟ್ ನ ಮೆಕ್ಕಾ ಎಂದೇ ಕರೆಯಲಾಗುವ ಲಾರ್ಡ್ಸ್ ನಲ್ಲಿರುವಂತಹ ಮ್ಯೂಸಿಯಂ ಧರ್ಮಶಾಲೆಯಲ್ಲಿ ಶುರುವಾಗಲಿದೆ.

ಈ ಕ್ರಿಕೆಟ್ ಮ್ಯೂಸಿಯಂಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಡಿಪಾಯ ಹಾಕಲಿದ್ದಾರೆ. ಸೋಮವಾರ ಧರ್ಮಶಾಲೆಗೆ ತೆರಳಲಿರುವ ಸಚಿನ್ ಮೇ 2 ರಂದು ಮ್ಯೂಸಿಯಂಗೆ ಗುದ್ದಲಿ ಪೂಜೆ ಮಾಡಲಿದ್ದಾರೆ. ಮೇ 3 ರವರೆಗೆ ಧರ್ಮಶಾಲೆಯಲ್ಲಿರುವ ಸಚಿನ್ ತೆಂಡೂಲ್ಕರ್ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಆಟಗಾರರಿಗೆ ಸಲಹೆ ನೀಡಲಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಧರ್ಮಶಾಲೆಯಲ್ಲಿ ಶುರುವಾಗಲಿರುವ  ಮ್ಯೂಸಿಯಂನಲ್ಲಿ ಸಚಿನ್ ತೆಂಡೂಲ್ಕರ್ ಪ್ರತಿಮೆಯಿರಲಿದೆ. ಇದಲ್ಲದೆ ಮಾಜಿ ನಾಯಕ ಕಪಿಲ್ ದೇವ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಪ್ರತಿಮೆ ಮ್ಯೂಸಿಯಂನಲ್ಲಿರಲಿದೆ.

ಭಾರತೀಯ ಕ್ರಿಕೆಟ್ ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳು ಕೂಡ ಮ್ಯೂಸಿಯಂನಲ್ಲಿರಲಿವೆ. ಧರ್ಮಶಾಲೆಗೆ ಹೋಗಲಿರುವ ಸಚಿನ್, ದಲೈಲಾಮಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...