alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಯರ್ ಬಾಟಲ್ ಹಿಡಿದ ಆಟಗಾರರ ಕಾಲೆಳೆದ ನೆಟ್ಟಿಗರು

ನಾಟಿಂಗ್ ಹ್ಯಾಮ್ ಅಂಗಳದಲ್ಲಿ ಇಂಗ್ಲೆಂಡ್ ತಂಡವನ್ನು 203 ರನ್ ಗಳಿಂದ ಮಣಿಸಿದ ಟೀಮ್ ಇಂಡಿಯಾ, ಐದು ಟೆಸ್ಟ್ ಪಂದ್ಯಗಳ ಸರಣಿ ಜೀವಂತವಾಗಿರಿಸಿಕೊಂಡಿದೆ. ಈ ಜಯದ ಸಂಭ್ರಮಾಚರಣೆಯ ಫೋಟೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಫೋಟೋದಲ್ಲಿ ಆರಂಭಿಕರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಬಿಯರ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಈ ಫೋಟೋ ಕಂಡು ಅಭಿಮಾನಿಗಳು ಆಟಗಾರರ ಕಾಲು ಎಳೆದಿದ್ದಾರೆ.

ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಮುರಳಿ ವಿಜಯ್, ಮೊದಲೆರೆಡು ಟೆಸ್ಟ್ ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್ ನಿಂದ ಡ್ರಾಪ್ ಮಾಡಲಾಯಿತು. ಅಲ್ಲದೆ ಮುಂಬರುವ ನಾಲ್ಕು ಹಾಗೂ ಐದನೇ ಟೆಸ್ಟ್ ನಿಂದಲೂ ಕೈ ಬಿಡಲಾಗಿದೆ. ಶಿಖರ್ 2ನೇ ಟೆಸ್ಟ್ ನಲ್ಲಿ ಬೆಂಚ್ ಕಾಯ್ದರೂ, ಮೂರನೇ ಟೆಸ್ಟ್ ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ್ದರಿಂದ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಶಿಖರ್ ಧವನ್ ಈ ಫೋಟೋ ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳು ಈ ಪಾರ್ಟಿ ಯಾವ ಖುಷಿಗೆ ಎಂದು ಕೇಳಿದ್ದಾರೆ. ಅಲ್ಲದೆ ಮುರಳಿ ವಿಜಯ್ ರ ವಿದಾಯದ ಸಂಭ್ರಮನಾ ಎಂದು ಕಾಲು ಎಳೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...