alex Certify
ಕನ್ನಡ ದುನಿಯಾ       Mobile App
       

Kannada Duniya

ರೋಚಕ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದ ಭಾರತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

136 ರನ್ ಗುರಿ ಪಡೆದ ಭಾರತ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸುವ ಮೂಲಕ ರೋಚಕ ಜಯಗಳಿಸಿದೆ.

ಭಾರತದ ಪರವಾಗಿ ರೋಹಿತ್ ಶರ್ಮಾ 27, ಲೋಕೇಶ್ ರಾಹುಲ್ 4, ಶ್ರೇಯಸ್ ಅಯ್ಯರ್ 30, ಮನೀಶ್ ಪಾಂಡೆ 32, ಹಾರ್ದಿಕ್ ಪಾಂಡ್ಯ 4, ದಿನೇಶ್ ಕಾರ್ತಿಕ್ ಅಜೇಯ 18, ಎಂ.ಎಸ್. ಧೋನಿ ಅಜೇಯ 16 ರನ್ ಗಳಿಸಿದ್ದಾರೆ. ಶ್ರೀಲಂಕಾ ಪರವಾಗಿ ದಾಸುನ್ ಸನಕ 2, ದುಷ್ಮಂತ ಚಾಮಿರಾ 2 ವಿಕೆಟ್ ಪಡೆದರು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಶ್ರೀಲಂಕಾ ಪರವಾಗಿ ನಿರೊಶಾನ್ ಡಿಕ್ವೆಲ್ಲಾ 1, ಉಪುಲ್ ತರಂಗ 11, ಕುಸಾಲ್ ಪೆರೆರಾ 4, ಸದಿರ ಸಮರ ವಿಕ್ರಮ 21, ಅಸೆಲ ಗುಣರತ್ನೆ 36 ಧನುಷ್ಕ ಗುಣತಿಲಕ 3, ತಿಸಾರ ಪೆರೆರಾ 11, ದಾಸುನ್ ಸನಕ ಅಜೇಯ 29, ಅಖಿಲ ಧನಂಜಯ ಅಜೇಯ 11 ರನ್ ಗಳಿಸಿದರು.

ಭಾರತದ ಪರ ಜಯದೇವ್ ಉನದ್ಕತ್ 2, ವಾಷಿಂಗ್ಟನ್ ಸುಂದರ್ 1, ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 1, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ.

ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ಈ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...