alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಗೆಲುವಿಗೆ ಬೇಕಿದೆ 136 ರನ್

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಶ್ರೀಲಂಕಾ ಪರವಾಗಿ ನಿರೊಶಾನ್ ಡಿಕ್ವೆಲ್ಲಾ 1, ಉಪುಲ್ ತರಂಗ 11, ಕುಸಾಲ್ ಪೆರೆರಾ 4, ಸದಿರ ಸಮರ ವಿಕ್ರಮ 21, ಅಸೆಲ ಗುಣರತ್ನೆ 36 ಧನುಷ್ಕ ಗುಣತಿಲಕ 3, ತಿಸಾರ ಪೆರೆರಾ 11, ದಾಸುನ್ ಸನಕ ಅಜೇಯ 29, ಅಖಿಲ ಧನಂಜಯ ಅಜೇಯ 11 ರನ್ ಗಳಿಸಿದ್ದಾರೆ.

ಭಾರತದ ಪರ ಜಯದೇವ್ ಉನದ್ಕತ್ 2, ವಾಷಿಂಗ್ಟನ್ ಸುಂದರ್ 1, ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 1, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ.

ಭಾರತದ ಗೆಲುವಿಗೆ 136 ರನ್ ಗಳು ಬೇಕಿದೆ. ಮೊದಲೆರಡು ಪಂದ್ಯಗಳನ್ನು ಜಯಿಸಿರುವ ಭಾರತ ಸರಣಿಯನ್ನು ವಶಕ್ಕೆ ಪಡೆದಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...