alex Certify
ಕನ್ನಡ ದುನಿಯಾ       Mobile App
       

Kannada Duniya

ಮಹೇಂದ್ರ ‘ಬಾಹುಬಲಿ’ ಅಬ್ಬರ, ಫೈನಲ್ ಗೆ ಪುಣೆ

doni-d

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫೈನಲ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಪುಣೆ ತಂಡದ ಪರವಾಗಿ ಮಹೇಂದ್ರ ಸಿಂಗ್ ಧೋನಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 26 ಎಸೆತಗಳಲ್ಲಿ 5 ಸಿಕ್ಸರ್ ಒಳಗೊಂಡ 40 ರನ್ ಗಳಿಸಿದ ಧೋನಿ ಅಜೇಯರಾಗುಳಿದರು.

ಅಜಿಂಕ್ಯಾ ರೆಹಾನೆ 56, ಸ್ಟೀವನ್ ಸ್ಮಿತ್ 1, ಮನೋಜ್ ತಿವಾರಿ 58 ರನ್ ಗಳಿಸಿದ್ದಾರೆ. ಪುಣೆ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.

163 ರನ್ ಗೆಲುವಿನ ಗುರಿ ಪಡೆದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿ 20 ರನ್ ಅಂತರದಿಂದ ಸೋಲು ಕಂಡಿತು.

ಲೆಂಡ್ಸ್ ಸಿಮನ್ಸ್ 5, ಪಾರ್ಥಿವ್ ಪಟೇಲ್ 52, ಕೀರನ್ ಪೋಲಾರ್ಡ್ 7, ಹಾರ್ದಿಕ್ 14, ಕೃನಾಲ್ ಪಾಂಡ್ಯ 15, ಮೆಕ್ಸ್ ನೆಗಸ್ 12 ಜಸ್ ಪ್ರೀತ್ ಬೂಮ್ರಾ ಅಜೇಯ 16 ರನ್ ಗಳಿಸಿದರು.

ಫೈನಲ್ ತಲುಪಲು ಮುಂಬೈ ಇಂಡಿಯನ್ಸ್ ಗೆ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮತ್ತೊಂದು ಅವಕಾಶ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...