alex Certify
ಕನ್ನಡ ದುನಿಯಾ       Mobile App
       

Kannada Duniya

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಎಂ.ಎಸ್.ಕೆ. ಪ್ರಸಾದ್ ನೇಮಕ

msk-prasadಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ವಿಕೆಟ್ ಕೀಪರ್ ಎಂ.ಎಸ್.ಕೆ. ಪ್ರಸಾದ್ ನೇಮಕಗೊಂಡಿದ್ದು, ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಪ್ರಕಟಿಸಲಾಗಿದೆ.

ಇದುವರೆಗೂ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಸಂದೀಪ್ ಪಾಟೀಲ್ ಅವರ ಸ್ಥಾನಕ್ಕೆ ಎಂ.ಎಸ್.ಕೆ. ಪ್ರಸಾದ್ ನೇಮಕವಾಗಿದ್ದು, ಪ್ರಸ್ತುತ ಅವರು ದಕ್ಷಿಣ ವಿಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಇವರೊಂದಿಗೆ ದೇವಾಂಗ್ ಗಾಂಧಿ, ಜತಿನ್ ಪರಾಂಜಪೆ, ಸರಣ್ ದೀಪ್ ಸಿಂಗ್ ಹಾಗೂ ಗಗನ್ ಕೋಡಾ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ.

41 ವರ್ಷದ ಎಂ.ಎಸ್.ಕೆ. ಪ್ರಸಾದ್ ಆರು ಟೆಸ್ಟ್ ಹಾಗೂ 17 ಏಕ ದಿನ ಪಂದ್ಯಗಳನ್ನಾಡಿದ್ದು, ಟೆಸ್ಟ್ ನಲ್ಲಿ 106 ಹಾಗೂ ಏಕ ದಿನ ಪಂದ್ಯಗಳಲ್ಲಿ 131 ರನ್ ಗಳಿಸಿದ್ದಾರೆ. ಲೋಧಾ ಸಮಿತಿ ಶಿಫಾರಸ್ಸಿನಂತೆ ಪ್ರಸಾದ್ ನೇಮಕದ ಮಾಹಿತಿಯನ್ನು ಬಿಸಿಸಿಐ, ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಬಳಿಕ ಅನುಮೋದನೆಗೊಳಗಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...