alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಕೇಳಿದ ಸಾಕ್ಷಿ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಆರ್ಮ್ಸ್ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಸಮಯ ಮನೆಯಲ್ಲಿ ಒಂಟಿಯಾಗಿರುತ್ತೇನೆ. ಏಕಾಂಗಿಯಾಗಿ ಪ್ರಯಾಣ ಬೆಳೆಸುವ ಸಂದರ್ಭ ಬರುತ್ತೆ. ನನ್ನ ಜೀವಕ್ಕೆ ಅಪಾಯವಿದೆ. ಹಾಗಾಗಿ ಆರ್ಮ್ಸ್ ಪರವಾನಗಿ ನೀಡಿ ಎಂದು ಸಾಕ್ಷಿ ಅರ್ಜಿಯಲ್ಲಿ ಹೇಳಿದ್ದಾರೆ.

ಪಿಸ್ತೂಲ್ ಅಥವಾ 0.2 ರಿವಾಲ್ವಾರ್ ಖರೀದಿ ಮಾಡಲು ಪರವಾನಗಿ ಕೇಳಿದ್ದಾರೆ. ಆದಷ್ಟು ಬೇಗ ಪರವಾನಗಿ ನೀಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. 2010 ರಲ್ಲಿ ಮಹೇಂದ್ರ ಸಿಂಗ್ ಧೋನಿ ಆರ್ಮ್ಸ್ ಪರವಾನಗಿ ಪಡೆದಿದ್ದಾರೆ. ಪರವಾನಗಿ ನಂತ್ರ ಅವ್ರು ಪಿಸ್ತೂಲ್ ಖರೀದಿ ಮಾಡಿದ್ದಾರೆ. ಆದ್ರೆ ಪರವಾನಗಿ ಸುಲಭವಾಗಿ ಸಿಕ್ಕಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ಅರ್ಜಿ ರವಾನಿಸಲಾಗಿತ್ತು. ಅಲ್ಲಿ ಒಪ್ಪಿಗೆ ಸಿಕ್ಕ ಮೇಲೆ ಪರವಾನಗಿ ನೀಡಲಾಗಿತ್ತು. ರಾಂಚಿ ಜಿಲ್ಲಾಡಳಿತ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುವ ಮೊದಲು ಧೋನಿ ಬಳಿ ಪ್ರಮಾಣ ಪತ್ರವನ್ನು ಕೇಳಿತ್ತು.

ಮ್ಯಾಜಿಸ್ಟ್ರೇಟ್ ಕಚೇರಿಗೆ ಸಾಕ್ಷಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಅರಗೋಡಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಪೊಲೀಸ್ ಠಾಣೆ ನಂತ್ರ ಅರ್ಜಿ ಡಿಎಸ್ಪಿಗೆ ತಲುಪಿದ್ದು ಅಲ್ಲಿಂದ ಎಸ್ ಎಸ್ಪಿ ಕಚೇರಿಗೆ ಹೋಗಿದೆ. ಜುಲೈ ಮೂರರಿಂದ ಇಂಗ್ಲೆಂಡ್ ಪ್ರವಾಸ ಶುರುವಾಗಲಿದೆ. ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯಗಳಿಗಾಗಿ ಧೋನಿ ಇಂಗ್ಲೆಂಡ್ ಗೆ ತೆರಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...