alex Certify
ಕನ್ನಡ ದುನಿಯಾ       Mobile App
       

Kannada Duniya

ಪುಣೆ ನಾಯಕತ್ವದಿಂದ ಧೋನಿ ಕೈಬಿಟ್ಟಿದ್ದಕ್ಕೆ ಸೆಹ್ವಾಗ್ ಸಂತಸ..!

mahendra-singh-dhoni-l-walks-with-virendra-sehwag

ಐಪಿಎಲ್ ನ ‘ರೈಸಿಂಗ್ ಪುಣೆ ಸೂಪರ್ ಜೈಂಟ್ಸ್’ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿಯವರನ್ನು ತೆಗೆದುಹಾಕಲಾಗಿದೆ. ಐಪಿಲ್ ಹರಾಜಿಗೂ ಒಂದು ದಿನ ಮುನ್ನ ಈ ನಿರ್ಧಾರ ಕೈಗೊಂಡಿದ್ದ ಪುಣೆ ಫ್ರಾಂಚೈಸಿಗಳು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಪಟ್ಟ ಕಟ್ಟಲು ತೀರ್ಮಾನಿಸಿದ್ರು.

ಇತ್ತೀಚೆಗೆಷ್ಟೆ ಧೋನಿ ಟೀಂ ಇಂಡಿಯಾ ಏಕದಿನ ತಂಡದ ನಾಯಕತ್ವ ತ್ಯಜಿಸಿದ್ದರು. ಅದರ ಬೆನ್ನಲ್ಲೇ ಪುಣೆ ತಂಡದ ಕ್ಯಾಪ್ಟನ್ಸಿಯಿಂದ್ಲೂ ಕೊಕ್ ನೀಡಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ರೆ ಧೋನಿಯ ನಾಯಕತ್ವ ಕಿತ್ತುಕೊಂಡಿರೋದ್ರಿಂದ ವೀರೇಂದ್ರ ಸೆಹ್ವಾಗ್ ಗೆ ಖುಷಿಯಾಗಿದೆಯಂತೆ. ಹಾಗಂತ ಧೋನಿ ಕಂಡ್ರೆ ಸೆಹ್ವಾಗ್ ಗೆ ದ್ವೇಷವಿರ್ಬೇಕು ಅಂದ್ಕೋಬೇಡಿ.

ಧೋನಿಯನ್ನು ನಾಯಕ ಪಟ್ಟದಿಂದ ಕೆಳಕ್ಕಿಳಿಸಿರೋದ್ರಿಂದ ಐಪಿಎಲ್ ನಲ್ಲಿ ತಮ್ಮ ‘ಕಿಂಗ್ಸ್ ಇಲವೆನ್ ಪಂಜಾಬ್’ ತಂಡ ‘ರೈಸಿಂಗ್ ಪುಣೆ ಸೂಪರ್ ಜೈಂಟ್ಸ್’ ತಂಡವನ್ನು ಸೋಲಿಸಬಹುದು ಅನ್ನೋದು ಸೆಹ್ವಾಗ್ ಲೆಕ್ಕಾಚಾರ. ಧೋನಿಯನ್ನು ನಾಯಕನನ್ನಾಗಿ ಮಾಡೋದು ಬಿಡೋದು ತಂಡದ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ, ಆದ್ರೆ ಧೋನಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲೊಬ್ಬ ಎಂದಿದ್ದಾರೆ ಸೆಹ್ವಾಗ್. ಐಪಿಎಲ್ ನ ಕಳೆದ 9 ಆವೃತ್ತಿಗಳಲ್ಲೂ ನಾಯಕನಾಗಿದ್ದ ಧೋನಿ, ಈ ಬಾರಿ ಕೇವಲ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...