alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ಹೇಳ್ತಿದೆ ಧೋನಿಯೇ ಇಂದಿಗೂ ಟೀಮ್ ಇಂಡಿಯಾ ಕ್ಯಾಪ್ಟನ್

ಟೆಸ್ಟ್, ಒನ್ ಡೇ ಟಿ- 20 ಪಂದ್ಯಗಳಲ್ಲಿ ಸದ್ಯ ಟೀಮ್ ಇಂಡಿಯಾವನ್ನು ಮುನ್ನಡೆಸ್ತಿರೋದು ವಿರಾಟ್ ಕೊಹ್ಲಿ .

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತುಂಬಾ ಹಿಂದೆಯೇ ಭವಿಷ್ಯದ ದೃಷ್ಟಿಯಿಂದ ನಾಯಕತ್ವದ ಸ್ಥಾನವನ್ನ ತೊರೆದು ಕೇವಲ ಆಟಗಾರನಾಗಿ ಮುಂದುವರೆಯುತ್ತಿದ್ದಾರೆ. ಆದ್ರೆ ಬಿಸಿಸಿಐ ಪ್ರಕಾರ ಇಂದಿಗೂ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಲ್ಲ, ಮಹೇಂದ್ರ ಸಿಂಗ್ ಧೋನಿ.

ಹೌದು. ಇದು ನಿಜಕ್ಕೂ ಅಚ್ಚರಿ ಎನಿಸೋ ವಿಚಾರವೇ. ವಿಶ್ವ ಕ್ರಿಕೆಟ್ ನ ಬಾಸ್ ಆಗಿರೋ ಬಿಸಿಸಿಐ ಅಧಿಕೃತ ಆಪ್ ನಲ್ಲಿನ ಮಾಹಿತಿಯ ಪ್ರಕಾರ, ಇಂದಿಗೂ ಟೀಮ್ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾನೇ ಹೇಳ್ತಿದೆ.

ಸದ್ಯ ಈ ವಿಚಾರ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಒಳಗಾಗ್ತಿದೆ. ಬಿಸಿಸಿಐ ಆಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರೊಫೈಲ್ ಓಪನ್ ಮಾಡಿದ್ರೆ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಅನ್ನೋ ಮಾಹಿತಿ ನೋಡೋಕೆ ಸಿಕ್ತಿದೆ. ಈ ಮಾಹಿತಿಯ ಸ್ಕ್ರೀನ್ ಶಾಟ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ.

ಅನೇಕರು ಈ ಸುದ್ದಿ ಇಂದಿಗೂ ನಿಜವಾದ್ರೆ ತುಂಬಾ ಒಳ್ಳೆಯದೇ ಅಂತ ಟ್ವೀಟ್ ಮಾಡಿದ್ರೆ ಮತ್ತೆ ಕೆಲವರು ನಾವು ಎಂಎಸ್ಡಿ ಕ್ಯಾಪ್ಟನ್ಸಿಯನ್ನು ಮಿಸ್ ಮಾಡಿಕೊಳ್ತಿದ್ದೀವಿ ಅಂತ ಟ್ವೀಟ್ ಮಾಡಿದ್ದಾರೆ. ಹಲವರು ಬಿಸಿಸಿಐನ ಇನ್ನೂ ಅಪ್ಡೇಟ್ ಅಗೇ ಇಲ್ವಾ ಅಂತ ಹಾಸ್ಯ ಚಟಾಕಿ ಹಾರಿಸ್ತಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐ ಆಪ್ನಲ್ಲಿರೋ ಧೋನಿ ಪ್ರೊಫೈಲ್ ನೆಟ್ರಿಜನ್ಸ್ ಗಳಿಗೆ ಒಳ್ಳೆ ಆಹಾರವಾಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...