alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಿನ ಮೂಲಕ ಈ ಆಫರ್ ಗಿಟ್ಟಿಸಿಕೊಂಡ ಧೋನಿ ಮಗಳು ಜೀವಾ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಮಗಳು ಜೀವಾ ಎಲ್ಲರ ಫೆವರೆಟ್. ಮುದ್ದು ಮುದ್ದಾಗಿರುವ ಜೀವಾ ಅಷ್ಟೇ ಮುದ್ದಾಗಿ ಮಾತನಾಡ್ತಾಳೆ. ಸಾಮಾಜಿಕ ಜಾಲತಾಣದಲ್ಲಿಯೂ ಜೀವಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ.

ಕೆಲ ದಿನಗಳ ಹಿಂದಷ್ಟೇ ಜೀವಾ ಮಲಯಾಳಂ ಚಿತ್ರದ ಹಾಡೊಂದನ್ನು ಹಾಡಿದ್ದಳು. ಇದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಜೀವಾ ಸಾಂಗ್ ಗೆ ಫುಲ್ ಮಾರ್ಕ್ಸ್ ಬಿದ್ದಿತ್ತು. ಇದನ್ನು ಜೀವಾ ಆಯಾ ಶೀಲಾ ಹೇಳಿಕೊಟ್ಟಿದ್ದರಂತೆ. ಶೀಲಾ ಕೇರಳದವರು.

ಜೀವಾ ಹಾಡು ಎಷ್ಟು ಪ್ರಸಿದ್ಧವಾಗಿದೆಯೆಂದ್ರೆ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಜೀವಾ ಪಾಲ್ಗೊಳ್ಳಲಿದ್ದಾಳೆ. ಕೇರಳದ ಆಲಪುಳ ಶ್ರೀಕೃಷ್ಣ ದೇವಸ್ಥಾನದಲ್ಲಿ ಜನವರಿ 14ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾಳೆ. ಕಲಾವಿದರು ಹಾಗೂ ಕ್ರಿಕೆಟ್ ಆಟಗಾರರ ನಡುವೆ ನಡೆದ ಫುಟ್ಬಾಲ್ ಪಂದ್ಯದಲ್ಲಿ ತಂದೆ ಧೋನಿಗೆ ನೀರು ಕುಡಿಸಿ ಜೀವಾ ಎಲ್ಲರ ಮನಗೆದ್ದಿದ್ದಳು. ಅದಕ್ಕೂ ಮುನ್ನ ಕೊಹ್ಲಿ ಜೀವಾಳ ಕ್ಯೂಟ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...