alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೊ: ಧೋನಿ ಮಗಳ‌ ಪ್ಲಾಂಕ್ ಇದೀಗ ವೈರಲ್

ಭಾರತ ಕ್ರಿಕೆಟ್ ತಂಡದ ಮಾಜಿ ಕೂಲ್ ಕಾಪ್ಟನ್ ಮಹೇಂದ್ರ ಸಿಂಗ್ ಧೋನಿ ಫಿಟ್ ನೆಸ್ ವಿಚಾರದಲ್ಲಿ ಅನೇಕ ಯುವಕರಿಗೆ ಮಾದರಿ. ಆದರೆ ಇದೀಗ ಧೋನಿ ಮಗಳು ತಂದೆಗೆ ತಕ್ಕ ಮಗಳಂತೆ ಫಿಟ್ ನೆಸ್ ಪ್ರದರ್ಶನ ಮಾಡಿದ್ದಾಳೆ.

ಧೋನಿ ಮಗಳು ಝೀವಾ, ಪ್ಲಾಂಕ್ ಪೋಸ್ ನೀಡಿರುವ ವಿಡಿಯೊ‌ ಇದೀಗ ವೈರಲ್ ಆಗಿದೆ. ಧೋನಿ ಪತ್ನಿ ಸಾಕ್ಷಿ ಅವರು ಮಾಡಿರುವ ವಿಡಿಯೊದಲ್ಲಿ ತಮ್ಮ ಮಗಳು ಮಾಡುತ್ತಿರುವ ಫಿಟ್ ನೆಸ್ ನ್ನು ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಝೀವಾ ಯೋಗ ಮ್ಯಾಟ್ ಮೇಲೆ ಮಲಗಿ, ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಈ ವೇಳೆ ವಿಡಿಯೊ‌ ಮಾಡಿರುವ ಸಾಕ್ಷಿ, ಇನ್ನು ಕೆಲಹೊತ್ತು ಮಾಡುವ ಇಚ್ಛೆ ಮಗಳಿಗೆ ಇತ್ತು. ಈ ರೀತಿ ಬ್ಯಾಲೆನ್ಸ್ ಮಾಡುವುದು ಕಷ್ಟದ ವಿಷಯ. ಆದರೆ ಈಕೆ‌ ಸುಲಭವಾಗಿ‌‌ ಮಾಡುತ್ತಿದ್ದಾಳೆ ಎನ್ನುವ ಮಾತನ್ನು ಸಾಕ್ಷಿ‌ ಹೇಳಿದ್ದಾರೆ.

ಸಾಕ್ಷಿ ಅವರು ಶೇರ್ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಅನೇಕರು ಝೀವಾಳನ್ನು ತಂದೆಗೆ ತಕ್ಕ ಮಗಳು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...