alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯನ್ನು ಹಾಡಿಹೊಗಳಿದ ಕೊಹ್ಲಿ

msd_xedakdm-1

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದ ನಂತ್ರ ಧೋನಿ ಬಗ್ಗೆ ಅನೇಕ ಆಟಗಾರರು ಮೆಚ್ಚುಗೆಯ ಮಾತನಾಡಿದ್ದಾರೆ.

ಇದ್ರಲ್ಲಿ ವಿರಾಟ್ ಕೊಹ್ಲಿ ಕೂಡ ಹಿಂದೆ ಬಿದ್ದಿಲ್ಲ. ಧೋನಿ ವಿದಾಯದ ನಂತ್ರ ಎರಡನೇ ಬಾರಿ ಕೊಹ್ಲಿ ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ನಾನು ಅನೇಕ ಬಾರಿ ಟೀಂ ಇಂಡಿಯಾದಿಂದ ಹೊರಹೋಗುವುದನ್ನು ಧೋನಿ ತಪ್ಪಿಸಿದ್ದಾರೆಂದು ಕೊಹ್ಲಿ ಹೇಳಿದ್ದಾರೆ.

2008ರಲ್ಲಿ ಶ್ರೀಲಂಕಾದಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೊಹ್ಲಿ, ಧೋನಿ ನಾಯಕತ್ವದಲ್ಲಿ ಈವರೆಗೆ ಆಟವಾಡಿದ್ದಾರೆ. ಆರಂಭದ ದಿನಗಳಲ್ಲಿ ಕೊಹ್ಲಿ ಆಟ ಉತ್ತಮವಾಗಿರಲಿಲ್ಲ. ಈ ವೇಳೆ ಕೊಹ್ಲಿ ಮೇಲಿದ್ದ ಭರವಸೆಯನ್ನು ಕಳೆದುಕೊಳ್ಳದ ಧೋನಿ, ಟೀಂ ಇಂಡಿಯಾದಲ್ಲಿ ಕೊಹ್ಲಿ ಸ್ಥಾನವನ್ನು ಭದ್ರವಾಗಿಟ್ಟಿದ್ದರಂತೆ.  ಉತ್ತಮ ಕ್ರಿಕೆಟರ್ ಆಗಲು ನನಗೆ ಧೋನಿ ಅವಕಾಶ ನೀಡಿದ್ರು. ಹಾಗೆ ಅನೇಕ ಬಾರಿ ಟೀಂ ಇಂಡಿಯಾದಿಂದ ಹೊರಹೋಗುವುದನ್ನು ತಪ್ಪಿಸಿದ್ರು ಎಂದಿದ್ದಾರೆ ಕೊಹ್ಲಿ.

ನಾಯಕನ ರೂಪದಲ್ಲಿ ಧೋನಿ ಸ್ಥಾನವನ್ನು ನಿಭಾಯಿಸುವುದು ಸುಲಭದ ಮಾತ್ರವಲ್ಲ. ಧೋನಿ ಎಂದರೆ ನಾಯಕ, ನಾಯಕ ಎಂದ್ರೆ ಧೋನಿ. ನನಗೆ ಧೋನಿ ಯಾವಾಗ್ಲೂ ನನ್ನ ನಾಯಕರೇ ಎಂದಿದ್ದಾರೆ ಕೊಹ್ಲಿ.

 

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...