alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮ’ನಿಗೆ ಕೊಹ್ಲಿ, ಧೋನಿ ಗೌರವ ಸಲ್ಲಿಸಿದ್ದು ಹೀಗೆ

star-plus

ನವದೆಹಲಿ: ತಾಯಿಗಿಂತ ಬಂಧುವಿಲ್ಲ, ತಾಯಿಯೇ ದೇವರು ಎಂಬ ಮಾತುಗಳನ್ನು ಸಾಮಾನ್ಯವಾಗಿ ಕೇಳಿರುತ್ತೀರಿ.

ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಅಮ್ಮನ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ಬೆಳವಣಿಗೆಯಲ್ಲಿ ತಾಯಿಯ ಆಶೀರ್ವಾದ, ಹಾರೈಕೆಯೂ ಇರುತ್ತದೆ. ಅದೇ ರೀತಿ ಖ್ಯಾತ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರೆಹಾನೆ ಅವರ ಜೀವನದಲ್ಲಿಯೂ ಅಮ್ಮಂದಿರ ಪಾತ್ರ ಪ್ರಮುಖವಾಗಿದೆ. ಈ ಮೂವರು ತಮ್ಮ ಜೆರ್ಸಿಗಳಲ್ಲಿ ತಾಯಿಯ ಹೆಸರು ಬರೆಸಿಕೊಂಡು ಗೌರವ ಸಲ್ಲಿಸಿದ್ದಾರೆ.

ಸ್ಟಾರ್ ಇಂಡಿಯಾ ವಾಹಿನಿ ‘ನಯೀ ಸೋಚ್’ ಅಭಿಯಾನದಲ್ಲಿ ಈ ಮೂವರು ಕ್ರಿಕೆಟಿಗರು ತಮ್ಮ ಜೀವನದಲ್ಲಿ ತಾಯಂದಿರು ವಹಿಸಿದ ಪಾತ್ರದ ಬಗ್ಗೆ ಹೇಳಿಕೊಂಡು ಗೌರವ ಸಲ್ಲಿಸಿದ್ದಾರೆ.

ಧೋನಿ ತಾಯಿ ದೇವಕಿ, ವಿರಾಟ್ ಕೊಹ್ಲಿ ಅವರ ತಾಯಿ ಸರೋಜ್ ಹಾಗೂ ರೆಹಾನೆ ತಾಯಿ ಸುಜಾತಾ ಅವರು ಯಶಸ್ಸಿಗೆ ಕಾರಣವಾಗಿರುವುದನ್ನು ಹೇಳಿಕೊಂಡಿದ್ದಾರೆ. ತಮ್ಮ ತಾಯಂದಿರ ಹೆಸರನ್ನು ಜೆರ್ಸಿ ಮೇಲೆ ಬರೆಸಿಕೊಂಡು ಗೌರವ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...