alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಪ್ರಿಯರಿಗೆ ಬಿಗ್ ಶಾಕ್: ನಿವೃತ್ತಿಯಾಗ್ತಾರಾ ಮಹೇಂದ್ರ ಸಿಂಗ್ ಧೋನಿ?

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಪರಾಭವಗೊಂಡಿದೆ. ಟಿ-20 ಯಲ್ಲಿ ಗೆಲುವಿನ ನಗೆ ಬೀರಿದ್ದ ಭಾರತ ತಂಡ, ಏಕದಿನ ಸರಣಿಯಲ್ಲೂ ಗೆಲುವಿನ ವಿಶ್ವಾಸ ಹೊಂದಿತ್ತಾದರೂ ಅದು ವಿಫಲವಾಗಿದೆಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರಿಂದ ಇದೇ ಚರ್ಚೆ ನಡೆದಿದ್ದು, ಈಗಲೇ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದಬೇಡಿ ಎಂದು ಅಭಿಮಾನಿಗಳು ಧೋನಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಲೀಡ್ಸ್ ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದ ಬಳಿಕ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಅವರ ನಡೆಯೊಂದು ಈಗ ಕ್ರೀಡಾಭಿಮಾನಿಗಳಿಗೆ ಶಾಕ್ ಉಂಟು ಮಾಡಿದೆ.

ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅಂಪೈರ್ ಅನುಮತಿ ಕೇಳಿ ಚೆಂಡನ್ನು ಪಡೆದುಕೊಂಡಿದ್ದು, ಈಗಾಗಲೇ ಟೆಸ್ಟ್ ನಿಂದ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಈಗ ಏಕದಿನ ಪಂದ್ಯಗಳಿಗೂ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ತಾವಾಡಿರುವ ಕೊನೆ ಪಂದ್ಯದ ಚೆಂಡನ್ನು ಧೋನಿ ಪಡೆದುಕೊಂಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರಿಂದ ಇದೇ ಚರ್ಚೆ ನಡೆದಿದ್ದು, ಈಗಲೇ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದಬೇಡಿ ಎಂದು ಅಭಿಮಾನಿಗಳು ಧೋನಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...