alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಆಟಗಾರರಿಗೆ `ವಾಟರ್ ಮೆನ್’ ಆದ ಧೋನಿ : ರೈನಾಗೆ ಕುಡಿಸಿದ್ರು ನೀರು

ಶುಕ್ರವಾರ ತಡರಾತ್ರಿ ನಡೆದ ಐರ್ಲೆಂಡ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾ, ಐರ್ಲೆಂಡ್ ಗೆ 214 ರನ್ ಗಳ ಟಾರ್ಗೆಟ್ ನೀಡಿತ್ತು. ಆದ್ರೆ ಐರ್ಲೆಂಡ್ 70 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾಕ್ಕೆ ಶರಣಾಯ್ತು. ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲರ ಗಮನ ಸೆಳೆದ್ರು.

ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿಗೆ ವಿಶ್ರಾಂತಿ ನೀಡಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿತ್ತು. ವಿಶ್ರಾಂತಿಯಲ್ಲಿದ್ದ ಧೋನಿ ಎಲ್ಲರನ್ನೂ ಆಶ್ಚರ್ಯಗೊಳಿಸುವ ಕೆಲಸ ಮಾಡಿದ್ರು. ಡ್ರಿಂಕ್ ಬ್ರೇಕ್ ವೇಳೆ ಸುರೇಶ್ ರೈನಾರಿಗಾಗಿ ವಾಟರ್ ಬಾಟಲ್ ಹಾಗೂ ಕಿಟ್ ಹಿಡಿದು ಮೈದಾನಕ್ಕೆ ಬಂದ್ರು ಧೋನಿ.

ಮೈದಾನದಲ್ಲಿ ಆಟವಾಡದೆ ಹೋದ್ರೂ ಧೋನಿ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾದ್ರು. ಹಿಂದೆ ನಾಯಕನಾಗಿದ್ದ ಹಾಗೂ ಅನೇಕ ದಾಖಲೆಗಳನ್ನು ಮಾಡಿರುವ ಕೊಹ್ಲಿ ಅಹಂಕಾರವಿಲ್ಲದೆ ನೀರಿನ ಬಾಟಲಿ ಹಿಡಿದು ಸಹ ಆಟಗಾರನ ನೆರವಿಗೆ ಬಂದಿದ್ದು ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...