alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆ ಮೇಲೆ ಬರಲಿದೆ ಎಂ.ಎಸ್.ಧೋನಿ ಸೀಕ್ವೆಲ್ ? ಕಥೆಯಲ್ಲಿ ಟ್ವಿಸ್ಟ್

ಕ್ರಿಕೆಟ್ ಚಕ್ರವರ್ತಿ ಎಂ.ಎಸ್.ಧೋನಿ ಅಭಿಮಾನಿಗಳಿಗೊಂದು ಖುಷಿ ಸುದ್ದಿ. 2016 ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಸೀಕ್ವೆಲ್ ಬರಲಿದೆಯಂತೆ.

ಮಿಡ್ ಡೇ ವರದಿ ಪ್ರಕಾರ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಸೀಕ್ವೆಲ್ ತಯಾರಾಗ್ತಿದೆಯಂತೆ. ಈ ಚಿತ್ರದಲ್ಲೂ ಎಂ.ಎಸ್.ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಳ್ಳಲಿದ್ದಾರೆ. ಸೀಕ್ವೆಲ್ ನಲ್ಲಿ ವಿಶ್ವಕಪ್ ಹಾಗೂ ಖಾಸಗಿ ಜೀವನವನ್ನು ಹೆಚ್ಚು ಕೇಂದ್ರೀಕರಿಸಲಾಗಿದೆಯಂತೆ.

ಐಪಿಎಲ್ ನಲ್ಲಿ ಚೆನ್ನೈ ನಾಯಕನಾಗಿ ಮಿಂಚುತ್ತಿರುವ ಧೋನಿ ಸಾಧನೆ ಹಾಗೂ 2015ರ ವಿಶ್ವಕಪ್ ಗೆಲುವನ್ನು ಚಿತ್ರ ಒಳಗೊಂಡಿರುತ್ತದೆಯಂತೆ. ಈಗಾಗಲೇ ಸುಶಾಂತ್ ತಯಾರಿ ಶುರು ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಚಿತ್ರ ತೆರೆ ಮೇಲೆ ಬರುವ ನಿರೀಕ್ಷೆ ಹೆಚ್ಚಿದೆ. ಎಂ ಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ 2016 ರಲ್ಲಿ ತೆರೆಗೆ ಬಂದಿತ್ತು. ನೀರಜ್ ಪಾಂಡೆ ಚಿತ್ರವನ್ನು ನಿರ್ದೇಶಿಸಿದ್ದರು. 2016 ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...