alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳು ಜೀವಾ ಬಗ್ಗೆ ಧೋನಿ ಹೇಳಿದ್ದೇನು…?

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಇಂಗ್ಲೆಂಡ್ ಪ್ರವಾಸ ಮುಗಿಸಿ ವಾಪಸ್ ಆಗಿದ್ದಾರೆ. ಮಗಳು ಜೀವಾ ಹಾಗೂ ಪತ್ನಿ ಸಾಕ್ಷಿ ಜೊತೆ ಕಾಲ ಕಳೆಯುತ್ತಿರುವ ಧೋನಿಗೆ ಮಗಳು ಜೀವಾ ಎಂದ್ರೆ ಅಚ್ಚುಮೆಚ್ಚು. ಮಗಳ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕ್ತಿರುವ ಧೋನಿ ಈಗ ಮತ್ತೊಂದು ವಿಷ್ಯವನ್ನು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಧೋನಿ, ಮಗಳು ಜೀವಾ ಬಗ್ಗೆ ಹೇಳಿದ್ದಾರೆ. ಮಗಳು ಮೈದಾನದಲ್ಲಿದ್ರೆ ಒತ್ತಡ ಕಡಿಮೆಯಾಗುತ್ತದೆ. ಆಟವಾಡಲು ಮತ್ತಷ್ಟು ಪ್ರೋತ್ಸಾಹ ಸಿಗುತ್ತದೆ ಎಂದಿದ್ದಾರೆ ಧೋನಿ. ಜೀವಾ ಮೈದಾನಕ್ಕೆ ಬರ್ತಾಳಾ ಇಲ್ವ ಎಂಬುದು ಬೇರೆ ವಿಚಾರ. ಆಕೆ ನನ್ನ ಆಸುಪಾಸಿದ್ರೆ ಇಷ್ಟವಾಗುತ್ತದೆ. ಜೀವಾಗೆ ಈಗ ಮೂರುವರೆ ವರ್ಷ. ಆದ್ರೆ ಆಕೆ ವರ್ತನೆ ನನಗೆ ವಿಶೇಷವಾದದ್ದು ಎಂದಿದ್ದಾರೆ.

ಈ ಹಿಂದೆ ಕೂಡ ಜೀವಾ ಬಗ್ಗೆ ಧೋನಿ ಮಾತನಾಡಿದ್ದರು. ಕ್ರಿಕೆಟ್ ಗಾಗಿ ನಾನು ಹೊರಗೆ ಇರ್ತಿದ್ದ ಕಾರಣ ಜೀವಾಗೆ ನನ್ನ ಹೆಸರು ಹೇಳಿ ಭಯ ಹುಟ್ಟಿಸುತ್ತಿದ್ದರು. ಊಟ ಮಾಡದೆ ಹೋದ್ರೆ ಅಪ್ಪ ಬರ್ತಾರೆ ಎನ್ನುತ್ತಿದ್ದರು. ಆಗ ಜೀವಾ ನನ್ನ ನೋಡಿದ್ರೆ ಸ್ವಲ್ಪ ಭಯಪಟ್ಟುಕೊಳ್ತಿದ್ದಳು ಎಂದಿದ್ದರು. ಕ್ರಿಕೆಟ್ ಜೀವನದಲ್ಲಿ ಬದಲಾವಣೆಯಾಗಿಲ್ಲ. ಜೀವಾ ಬಂದ ಮೇಲೆ ನನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಧೋನಿ ಈ ಹಿಂದೆಯೂ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...