alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಹರಾಜು : ಅಶ್ವಿನ್ ಮೇಲೆ ಧೋನಿ ಕಣ್ಣು

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಚೆನ್ನೈನಲ್ಲಿದ್ದಾರೆ. ಐಪಿಎಲ್ ಗೆ ತಯಾರಿ ನಡೆಸುತ್ತಿರುವ ಧೋನಿ ಗುರುವಾರ ಐಪಿಎಲ್ ಹರಾಜಿನ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ಹರಾಜಿನಲ್ಲಿ ಆರ್. ಅಶ್ವಿನ್ ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇನೆಂದು ಧೋನಿ ಹೇಳಿದ್ದಾರೆ.

ಜನವರಿ 27 ಹಾಗೂ 28ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಐಪಿಎಲ್ ಸರಣಿಯಿಂದ ಹೊರ ಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ 2018ಕ್ಕೆ ವಾಪಸ್ ಆಗ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನಾಗಿ ಆಯ್ಕೆ ಮಾಡಿದ್ದು 15 ಕೋಟಿಗೆ ಖರೀದಿ ಮಾಡಿದೆ. ತಂಡಕ್ಕೆ ಸುರೇಶ್ ರೈನಾ (11 ಕೋಟಿ ರೂ.) ಹಾಗೂ ರವೀಂದ್ರ ಜಡೇಜಾ (7 ಕೋಟಿ ರೂ.) ವಾಪಸ್ ಆಗಿದ್ದಾರೆ.

ಆರ್. ಅಶ್ವಿನ್ ಖರೀದಿ ಸುಲಭವಲ್ಲ. ಆದ್ರೆ ಅವರು ಸ್ಥಳೀಯ ತಾರೆಯಾಗಿದ್ದು, ಅವರ ಅವಶ್ಯಕತೆ ತಂಡಕ್ಕಿದೆ ಎಂದು ಧೋನಿ ಹೇಳಿದ್ದಾರೆ. ನಮ್ಮ ತಂಡದ ಬಲ ಅಭಿಮಾನಿಗಳು. ನಾವು ಎಲ್ಲೆ ಇದ್ರೂ ಅಭಿಮಾನಿಗಳು ನಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಎರಡು ವರ್ಷಗಳಿಂದ ತಂಡ ಐಪಿಎಲ್ ನಿಂದ ಹೊರಗಿದ್ದರೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಧೋನಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...