alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ನಾಯಕತ್ವ ತೊರೆಯಲು ಇದಂತೆ ಕಾರಣ….

ms

ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಟಿ-ಟ್ವೆಂಟಿ ಹಾಗೂ ಏಕದಿನ ಪಂದ್ಯದ ನಾಯಕತ್ವಕ್ಕೆ ಧೋನಿ ವಿದಾಯ ಹೇಳಿದ್ದಾರೆ. ಆದ್ರೆ ಸಾಮಾನ್ಯ ಆಟಗಾರನಾಗಿ ಧೋನಿ ಆಟ ಮುಂದುವರೆಸಲಿದ್ದಾರೆ.

ಬಿಸಿಸಿಐ ಬುಧವಾರ ರಾತ್ರಿ ಟ್ವೀಟರ್ ನಲ್ಲಿ ಈ ವಿಷಯ ತಿಳಿಸಿದೆ. ಏಕದಿನ ಹಾಗೂ ಟಿ-ಟ್ವೆಂಟಿ ನಾಯಕತ್ವಕ್ಕೆ ಧೋನಿ ವಿದಾಯ ಹೇಳಿದ್ದರೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಪಂದ್ಯ ಹಾಗೂ ಟಿ-ಟ್ವೆಂಟಿ ಪಂದ್ಯಗಳಿಗೆ ನಡೆಯಲಿರುವ ಆಯ್ಕೆ ಸಭೆಯಲ್ಲಿ  ಧೋನಿ ಪಾಲ್ಗೊಳ್ಳಲಿದ್ದಾರೆ. ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ.

ಧೋನಿ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. 2019 ರಲ್ಲಿ ನಡೆಯಲಿರುವ ವಿಶ್ವಕಪ್ ಗಿಂತ ಮೊದಲು ಧೋನಿ ನಾಯಕತ್ವ ಬಿಟ್ಟು ಕೊಟ್ಟಿದ್ದಾರೆ. ಮುಂದಿನ ನಾಯಕನಿಗೆ ವಿಶ್ವಕಪ್  ಸಿದ್ಧತೆಗೆ ಹೆಚ್ಚಿನ ಅವಕಾಶ ಸಿಗಲಿ ಎನ್ನುವ ಕಾರಣಕ್ಕೆ ಧೋನಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗ್ತಾ ಇದೆ. ನಾಯಕತ್ವದ ಹೊಣೆ ವಿರಾಟ್ ಕೊಹ್ಲಿ ಹೆಗಲಿಗೇರುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...