alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ಐಪಿಎಲ್ ವೇಳೆಗೆ ಈ ಭಾಷೆ ಕಲೀತಾರಂತೆ ಧೋನಿ

ಮುಂದಿನ ಐಪಿಎಲ್ ವೇಳೆಗೆ ನಾನು ಇನ್ನಷ್ಟು ತಮಿಳು ಮಾತನಾಡೋದನ್ನ ಕಲಿಯುತ್ತೇನೆ ಅಂತ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ ನ ಮಧುರೈ ಪ್ಯಾಂಥರ್ಸ್ ಮತ್ತು ಕೋವಿಲ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಟಾಸ್ ವೇಳೆ ಕಾಣಿಸಿಕೊಂಡರು.

ಈ ಸಮಯದಲ್ಲಿ ಮಾಜಿ ಟೀಮ್ ಇಂಡಿಯಾ ಆಟಗಾರ ಶಿವರಾಮಕೃಷ್ಣನ್ ತಮಿಳಿನಲ್ಲಿ ಧೋನಿಯವರಿಗೆ ಹೇಗಿದ್ದೀರಿ ಅಂತ ಕೇಳಿದರು. ಇದರಿಂದ ಕೊಂಚ ಗೊಂದಲಕ್ಕೊಳಗಾದ ಧೋನಿ ತಮಿಳು ಮಾತನಾಡೋದಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಆನಂತರಲ್ಲಿ ಧೋನಿ, ಐಪಿಎಲ್ ವೇಳೆ ನಾವು ಹೆಚ್ಚು ಹೆಚ್ಚು ತಮಿಳು ಭಾಷೆಯನ್ನ ಕೇಳ್ತೀವಿ. ಆದ್ರೆ ಐಪಿಎಲ್ ಮುಗಿದ ನಂತರ ಅದು ನಮಗೆ ಮರೆತುಹೋಗುತ್ತದೆ. ಸ್ವಲ್ಪ ಮಟ್ಟಿಗೆ ನನಗೆ ತಿಳಿದಿರುವ ತಮಿಳು ಭಾಷೆಯ ಜ್ಞಾನವನ್ನು ಮುಂದಿನ ಐಪಿಎಲ್ ವೇಳೆಗೆ ಹೆಚ್ಚಿಸಿಕೊಳ್ತೀನಿ ಅಂತ ಇದೇ ವೇಳೆ ಪ್ರಾಮಿಸ್ ಮಾಡಿದ್ದಾರೆ.

ಆನಂತರ ತಮಿಳುನಾಡಿನ ಪ್ರೀಮಿಯರ್ ಲೀಗ್ ಗೆ ಬರೋದಕ್ಕೆ ಕಾರಣ ಇಂಡಿಯನ್ ಸೀಮೆಂಟ್ ಮತ್ತು ಧೋನಿ ನಡುವೆ ಇರುವ ವ್ಯವಹಾರಿಕ ಗೆಳೆತನ ಕಾರಣವಂತೆ. ಅಲ್ಲದೇ ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸೋದ್ರಿಂದ ತಮಿಳುನಾಡಿನ ಮೇಲೆ ವಿಶೇಷ ಕಾಳಜಿ ಇದೆ ಎಂದಿದ್ದಾರೆ ಎಂಎಸ್ ಧೋನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...