alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಕಟ್ಟಿದ ತೆರಿಗೆ ಎಷ್ಟು ಗೊತ್ತಾ…?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, 2017-18ರ ಸಾಲಿನಲ್ಲಿ 12.17 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಅಲ್ಲದೆ ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿ ಪಡೆದಿದ್ದಾರೆ.

2016-17 ಸಾಲಿನಲ್ಲೂ ಧೋನಿ 10.93 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಐಸಿಸಿಯ ಪ್ರಾಯೋಜಿತ ಎಲ್ಲ ಕಪ್ ಗೆದ್ದ ನಾಯಕ ಧೋನಿ, 2015ರಲ್ಲಿ 765 ಕೋಟಿ ರೂ. ಆಸ್ತಿ ಹೊಂದಿದ್ದಾಗಿ ಅಂದಾಜಿಸಲಾಗಿತ್ತು. 2015 ರಲ್ಲೇ ಧೋನಿ ಪಂದ್ಯಗಳ ಸಂಭಾವನೆ ಹಾಗೂ ಜಾಹೀರಾತು ಕಂಪನಿಗಳಿಂದ ಸುಮಾರು 213 ಕೋಟಿ ರೂ. ಹಣ ಪಡೆದಿದ್ದರು. ಇದರ ಅನ್ವಯ ವಿಶ‍್ವದ 100 ಶ್ರೀಮಂತ ಕ್ರೀಡಾ ಪಟುಗಳ ಪಟ್ಟಿಯಲ್ಲಿ 2015ರಲ್ಲಿ ಮಾಹಿ ಸ್ಥಾನ ಪಡೆದಿದ್ದರು.

2016ರಲ್ಲಿ ಧೋನಿ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗೆ ಇಳಿದ್ರು. ಈ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ನೀಡಲಾಯಿತು. ಬಿಸಿಸಿಐ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಧೋನಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಧೋನಿ ಹಲವು ಜಾಹೀರಾತು ಕಂಪನಿಗಳ ಪ್ರಚಾರ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ..

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...