alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಕ್ರಿಕೆಟ್ ತರಬೇತಿ ನೀಡಲಿದ್ದಾರೆ ಧೋನಿ

doni-dubai-dd

ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರು ದುಬೈನಲ್ಲಿ ಕ್ರಿಕೆಟ್ ಕುರಿತಾಗಿ ತರಬೇತಿ ನೀಡಲಿದ್ದಾರೆ.

ಧೋನಿ ಹೆಸರಲ್ಲಿ ದುಬೈನಲ್ಲಿ ಸ್ವಂತ ಕ್ರಿಕೆಟ್ ಅಕಾಡಮಿ ಸ್ಥಾಪನೆಯಾಗಿದೆ. ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ ಸಹಕಾರದಲ್ಲಿ ಆಗಸ್ಟ್ 15 ರಿಂದ ಕಾರ್ಯಾರಂಭ ಮಾಡಿರುವ ಅಕಾಡಮಿಗೆ ಧೋನಿ ಆಗಾಗ ಭೇಟಿ ನೀಡಲಿದ್ದಾರೆ.

ಪೆಸಿಫಿಕ್ ವೇಂಜರ್ಸ್ ರಿಯಲ್ ಎಸ್ಟೇಟ್ ಸಂಸ್ಥೆ ಪಾಲುದಾರ ಪರ್ವೇಜ್ ಖಾನ್ ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿದ್ದಾರೆ.

ಅಕಾಡಮಿಯಲ್ಲಿ ಉನ್ನತ ಮಟ್ಟದ ಸೌಕರ್ಯಗಳನ್ನು ಒದಗಿಸಲಾಗುವುದು. ಜೊತೆಗೆ ಉನ್ನತಮಟ್ಟದ ತರಬೇತಿಯನ್ನು ನೀಡಲಾಗುವುದು.

ಮಹೇಂದ್ರಸಿಂಗ್ ಧೋನಿ ಕ್ರಿಕೆಟ್ ಕುರಿತಾಗಿ ವಿಶೇಷ ಸಲಹೆ, ತರಬೇತಿಯನ್ನು ನೀಡಲಿದ್ದಾರೆ ಎಂದು ಪರ್ವೇಜ್ ಖಾನ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಹಲವು ಪ್ರಮುಖರು ಈಗಾಗಲೇ ಕ್ರಿಕೆಟ್ ಅಕಾಡಮಿಗಳನ್ನು ಸ್ಥಾಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...