alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ಧೋನಿ ನೋಡಲು ಮುಗಿಬಿದ್ದ ಫ್ಯಾನ್ಸ್

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಇಂದಿರಾ ನಗರದಲ್ಲಿ ತಮ್ಮದೇ ಹೆಸರಿನ ಸ್ಟೋರ್ ಉದ್ಘಾಟನೆ ನೆರವೇರಿಸಿದ್ದಾರೆ.

‘ಸೆವೆನ್ ಬೈ ಎಂ.ಎಸ್. ಧೋನಿ’ ಹೆಸರಿನ ಕಂಪನಿಯನ್ನು ಧೋನಿ 2016 ರಲ್ಲಿ ಆರಂಭಿಸಿದ್ದಾರೆ. ಸ್ಪೋರ್ಟ್ಸ್, ಫಿಟ್ನೆಸ್, ಬಟ್ಟೆ, ವಿವಿಧ ಉತ್ಪನ್ನಗಳ ಮಾರಾಟ ಮಳಿಗೆ ಇದಾಗಿದೆ. ಬೆಂಗಳೂರಿನಲ್ಲಿ ಸ್ಟೋರ್ ಆರಂಭವಾಗಿದ್ದು, ಧೋನಿ ಉದ್ಘಾಟನೆ ನೆರವೇರಿಸಿದ್ದಾರೆ.

‘ಸೆವೆನ್ ಬೈ ಎಂ.ಎಸ್. ಧೋನಿ’ ಸ್ಟೋರ್ ಉದ್ಘಾಟನೆಗೆ ಧೋನಿ ಆಗಮಿಸುತ್ತಿದ್ದಂತೆ, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದ್ದು, ಧೋನಿ ಪ್ರಯಾಸದಿಂದ ಮಳಿಗೆಗೆ ಆಗಮಿಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಮತ್ತು ಮಳಿಗೆಯ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...