alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಭೂಷಣ ಪ್ರಶಸ್ತಿಗೆ ಧೋನಿ ಹೆಸರು ಶಿಫಾರಸ್ಸು

ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗಾಗಿ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಿಸಿಸಿಐ ಶಿಫಾರಸ್ಸು ಮಾಡಿದೆ. ಈ ಮೂಲಕ ಧೋನಿ ಕೂಡ ಕೊಟ್ಟಾರಿ ನಾಯುಡು, ವಿನು ಮಂಕಡ್, ಸುನಿಲ್ ಗವಾಸ್ಕರ್, ರಾಜ ಭಲೆಂದ್ರ ಸಿಂಗ್, ದಿನಕರ್ ಬಲ್ವಂತ್ ದಿರೋಧರ್, ಕಪಿಲ್ ದೇವ್, ಚಂದು ಬೋರ್ಡೆ ಹಾಗೂ ರಾಹುಲ್ ದ್ರಾವಿಡ್ ಸಾಲಿಗೆ ಸೇರಲಿದ್ದಾರೆ.

ಈ ವರ್ಷ ಪದ್ಮಭೂಷಣ ಪ್ರಶಸ್ತಿಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಕೇವಲ ಧೋನಿ ಹೆಸರನ್ನು ಮಾತ್ರ ಶಿಫಾರಸು ಮಾಡಿದೆ. ನಾಯಕನಾಗಿ, ಆಟಗಾರನಾಗಿ ಧೋನಿ ಟೀಂ ಇಂಡಿಯಾಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

2015ರಲ್ಲೇ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಏಕದಿನ ಹಾಗೂ ಟಿ-20 ಪಂದ್ಯಗಳ ನಾಯಕತ್ವ ತ್ಯಜಿಸಿದ ಬಳಿಕವೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ. 14 ಏಕದಿನ ಇನ್ನಿಂಗ್ಸ್ ನಲ್ಲಿ 627 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ ವಿಕೆಟ್ ಕೀಪಿಂಗ್ ನಲ್ಲೂ ಸಾಧನೆ ಮಾಡಿದ್ದಾರೆ. 100 ಸ್ಟಂಪಿಂಗ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...