alex Certify
ಕನ್ನಡ ದುನಿಯಾ       Mobile App
       

Kannada Duniya

ಯಜುವೇಂದ್ರ ಚಾಹಲ್ ಗೆ ಧೋನಿ ಇಟ್ಟ ಹೆಸರೇನು ಗೊತ್ತಾ?

ಅಂತರಾಷ್ಟ್ರೀಯ ಕ್ರಿಕೆಟ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಯಜುವೇಂದ್ರ ಚಾಹಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆಚ್ಚಿನ ಬೌಲರ್. ಯಜುವೇಂದ್ರ ತಮ್ಮ ಬೌಲಿಂಗ್ ಮೂಲಕ ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್ ಗಳ ಬೆವರಿಳಿಸಿದ್ದಾರೆ. ಯಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕುಲದೀಪ್ ಯಾದವ್ ಜೊತೆ ಸೇರಿ ಭಾರತದ ಗೆಲುವಿಗೆ ಕಾರಣವಾಗಿದ್ದರು. ತಮ್ಮ ಅತ್ಯುತ್ತಮ ಆಟಕ್ಕೆ ಕುಲದೀಪ್ ಯಾದವ್ ಜೊತೆ ಮಹೇಂದ್ರ ಸಿಂಗ್ ಧೋನಿ ಕಾರಣ ಎನ್ನುತ್ತಾರೆ ಚಾಹಲ್.

ಅನೇಕ ಸಂದರ್ಶನಗಳಲ್ಲಿ ಚಾಹಲ್, ಮಹೇಂದ್ರ ಸಿಂಗ್ ಧೋನಿಯನ್ನು ಹೊಗಳಿದ್ದಾರೆ. ವಿಕೆಟ್ ಕೀಪಿಂಗ್ ಮಾಡುವ ಧೋನಿ ಆಗಾಗ ಸಲಹೆ ನೀಡುತ್ತಿರುತ್ತಾರೆ. ಅವ್ರ ಸಲಹೆ ಪಾಲಿಸಿ ಅನೇಕ ವಿಕೆಟ್ ಕಬಳಿಸಿದ್ದೇನೆ ಎಂದು ಚಾಹಲ್ ಹೇಳಿದ್ದಾರೆ. ಇದ್ರ ಜೊತೆ ಧೋನಿ ಮೈದಾನದಲ್ಲಿ ಹಾಸ್ಯ ಮಾಡ್ತಾ ಎಲ್ಲರನ್ನು ನಗಿಸುತ್ತಿರುತ್ತಾರಂತೆ.

ಧೋನಿ ಕೂಡ ಯಜುವೇಂದ್ರ ಚಾಹಲ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಆಟಗಾರರ ಪೈಕಿ ಯಜುವೇಂದ್ರ ತುಂಬಾ ತೆಳ್ಳಗಿದ್ದಾರೆ. ಹಾಗಾಗಿ ಧೋನಿ, ಚಾಹಲ್ ಗೆ ಅಡ್ಡ ಹೆಸರೊಂದನ್ನು ಇಟ್ಟಿದ್ದಾರಂತೆ. ಸಂದರ್ಶನದಲ್ಲಿ ಚಾಹಲ್ ಈ ವಿಷ್ಯ ಹೇಳಿದ್ದಾರೆ. ಧೋನಿ, ಚಾಹಲ್ ರನ್ನು ತಿಲ್ಲಿ ಎಂದು ಕರೆಯುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...