alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯಲ್ ಎಸ್ಟೇಟ್ ವಿವಾದದಲ್ಲಿ ಸಿಲುಕಿದ್ದಾರೆ ಧೋನಿ

ಕ್ರಿಕೆಟಿಗರ ಬಣ್ಣಬಣ್ಣದ ಜಾಹೀರಾತು ನೋಡಿ ಜನ ಮರುಳಾಗೋದು ಹೊಸದೇನಲ್ಲ. ಮಹೇಂದ್ರ ಸಿಂಗ್ ಧೋನಿ ಹಾಗೂ ಹರ್ಭಜನ್ ಸಿಂಗ್ ಕೂಡ ಆಮ್ರಪಾಲಿ ಅನ್ನೋ ರಿಯಲ್ ಎಸ್ಟೇಟ್ ಕಂಪನಿಯ ರಾಯಭಾರಿಗಳಾಗಿದ್ರು. ಕಂಪನಿಯ ಹೌಸಿಂಗ್ ಪ್ರಾಜೆಕ್ಟ್ ಗಳನ್ನು ಪ್ರಮೋಟ್ ಮಾಡಿದ್ರು.

ಆದ್ರೆ ಕ್ರಿಕೆಟಿಗರ ಹೆಸರು ಹೇಳಿಕೊಂಡು ಈ ಕಂಪನಿ ಜನರಿಗೆ ಪಂಗನಾಮ ಹಾಕಿದೆಯಂತೆ. ಕಂಪನಿ ಮಾಡಿರೋ ಮೋಸದ ಬಿಸಿ ಈಗ ಭಜ್ಜಿ ಹಾಗೂ ಧೋನಿಗೆ ತಟ್ಟಿದೆ. ಕಳೆದ ವರ್ಷವೇ ಧೋನಿ, ಕಂಪನಿ ಜೊತೆಗಿನ ಒಪ್ಪಂದ ಅಂತ್ಯಗೊಳಿಸಿದ್ದರು. ಆದ್ರೂ ವಿವಾದದಲ್ಲಿ ಸಿಲುಕಿದ್ದಾರೆ.

ಹಣ ತೊಡಗಿಸಿ ಮೋಸ ಹೋಗಿರೋ ಜನರು ಟ್ವಿಟ್ಟರ್ ನಲ್ಲಿ ಧೋನಿ ಹಾಗೂ ಹರ್ಭಜನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುಷಃ ನಿಮಗಿಬ್ಬರಿಗೂ ಉಚಿತವಾಗಿ ವಿಲ್ಲಾ ಸಿಕ್ಕಿರಬಹುದು, ನಿಮ್ಮನ್ನು ನಂಬಿ ನಮ್ಮ ಹಣ ಮುಳುಗಿ ಹೋಗಿದೆ ಅಂತಾ ರಮೇಶ್ ಎಂಬಾತ ಟ್ವೀಟ್ ಮಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರೋ ಭಜ್ಜಿ, ನಮಗೆ ಕೂಡ ಏನೂ ಸಿಕ್ಕಿಲ್ಲ. ಕಂಪನಿ ಮಾತು ನಂಬಿ ನಾವು ಮೂರ್ಖರಾಗಿದ್ದೇವೆ ಅಂತಾ ಟ್ವೀಟ್ ಮಾಡಿದ್ದಾರೆ. ಕಂಪನಿಯ ಮಾಲೀಕ ಧೋನಿ ಫ್ರೆಂಡ್ ಇರಬಹುದು ಎಂದಿದ್ದಕ್ಕೆ, ಅದನ್ನ ಅವರ ಬಳಿಯೇ ಕೇಳಿ ಅಂತಾ ರಿಪ್ಲೈ ಮಾಡಿದ್ದಾರೆ. ಇದೇ ಸಂಸ್ಥೆ 2011ರಲ್ಲಿ ವಿಶ್ವಕಪ್ ವಿಜೇತ ತಂಡದ ಎಲ್ಲಾ ಸದಸ್ಯರಿಗೂ ವಿಲ್ಲಾ ನೀಡುವುದಾಗಿ ಹೇಳಿತ್ತು. ಆದ್ರೆ ಮನೆಯನ್ನು ಕೊಟ್ಟೇ ಇಲ್ಲ ಅಂತಾ ಹರ್ಭಜನ್ ಹೇಳ್ತಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...