alex Certify
ಕನ್ನಡ ದುನಿಯಾ       Mobile App
       

Kannada Duniya

300 ನೇ ಪಂದ್ಯಕ್ಕೆ ಸಜ್ಜಾದ ಎಂ.ಎಸ್. ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 300 ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ.

ಆತಿಥೇಯ ಶ್ರೀಲಂಕಾ ವಿರುದ್ಧ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ 4 ನೇ ಪಂದ್ಯ ನಡೆಯಲಿದೆ.

ಈ ಪಂದ್ಯ ಧೋನಿ ಅವರ 300 ನೇ ಏಕದಿನ ಪಂದ್ಯವಾಗಿದೆ. ಭಾರತದ ಪರವಾಗಿ ಸಚಿನ್ ತೆಂಡೂಲ್ಕರ್(463), ರಾಹುಲ್ ದ್ರಾವಿಡ್(340), ಮಹಮ್ಮದ್ ಅಜರುದ್ದೀನ್(334), ಸೌರವ್ ಗಂಗೂಲಿ(308), ಯುವರಾಜ್ ಸಿಂಗ್(301) ಹೆಚ್ಚು ಏಕದಿನ ಪಂದ್ಯಗಳನ್ನಾಡಿದ್ದಾರೆ.

ಈ ಕ್ಲಬ್ ಗೆ ಮಹೇಂದ್ರ ಸಿಂಗ್ ಧೋನಿ ಸೇರಲಿದ್ದಾರೆ. 2004 ರ ಡಿಸೆಂಬರ್ 23 ರಂದು ಚಿತ್ತಗಾಂಗ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.

ವಿಕೆಟ್ ಕೀಪರ್, ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಧೋನಿ 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು.

ಏಕದಿನ ಕ್ರಿಕೆಟ್ ನಲ್ಲಿ 299 ಪಂದ್ಯಗಳನ್ನಾಡಿರುವ ಧೋನಿ 9608 ರನ್ ಗಳಿಸಿದ್ದು, 10 ಶತಕ, 278 ಕ್ಯಾಚ್, 99 ಸ್ಟಂಪಿಂಗ್ ದಾಖಲೆ ಹೊಂದಿದ್ದಾರೆ.

ನಾಯಕನಾಗಿ 199 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 110 ಪಂದ್ಯಗಳಲ್ಲಿ ಗೆಲುವು ತಂದಿದ್ದು, 74 ಪಂದ್ಯಗಳಲ್ಲಿ ಸೋಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...