alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ವಿದಾಯದ ಹಿಂದಿನ ಕಾರಣ ಬಿಚ್ಚಿಟ್ಟ ಭಟ್ಟಾಚಾರ್ಯ

502188-virat-dhoni-train-700

ಟೀಂ ಇಂಡಿಯಾ ಕ್ಯಾಪ್ಟನ್ ಹುದ್ದೆಗೆ ಗುಡ್ ಬೈ ಹೇಳಿರೋ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲೇ ಧೋನಿ ನಾಯಕ ಹುದ್ದೆ ತ್ಯಜಿಸಿದ್ದಾರೆ ಅನ್ನೋದು ಅವರ ಬಾಲ್ಯದ ಕೋಚ್ ಚಂಚಲ್ ಭಟ್ಟಾಚಾರ್ಯ ಅಭಿಪ್ರಾಯ.

ಅಷ್ಟೇ ಅಲ್ಲ, ನಾಯಕ ಪಟ್ಟದಿಂದ ನಿರ್ಗಮಿಸುವ ಮೂಲಕ ವಿರಾಟ್ ಕೊಹ್ಲಿಗೆ ಧೋನಿ ಹೊಸ ವರ್ಷದ ಉಡುಗೊರೆ ಕೊಟ್ಟಿದ್ದಾರೆ ಅಂತಾ ಚಂಚಲ್ ಭಟ್ಟಾಚಾರ್ಯ ಹೇಳಿದ್ದಾರೆ.

ಸುಮಾರು ಒಂದು ದಶಕದಿಂದ ಧೋನಿ ಟೀಂ ಇಂಡಿಯಾ ನಾಯಕನಾಗಿದ್ರು, ಕ್ಯಾಪ್ಟನ್ ಅಂದ್ಮೇಲೆ ಒತ್ತಡ ಸಹಜ. ಆ ಒತ್ತಡವಿಲ್ಲದೆ ಕ್ರಿಕೆಟ್ ಆಡಬೇಕು ಅನ್ನೋ ಕಾರಣಕ್ಕೆ ಧೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ನಾಯಕತ್ವದಿಂದ ದೂರ ಸರಿದಿದ್ರೂ ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಧೋನಿ ಆಡಲಿದ್ದಾರೆ ಅಂತಾ ಭಟ್ಟಾಚಾರ್ಯ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರಿಯಲು ಫಿಟ್ & ಫೈನ್ ಆಗಿರಬೇಕು ಅನ್ನೋ ಕಾರಣಕ್ಕೆ ಧೋನಿ ಜಾರ್ಖಂಡ್ ತಂಡದ ಜೊತೆಗೆ ಆಡಿದ್ದಾರೆ. ಅಷ್ಟೇ ಅಲ್ಲ, ಪ್ರತಿದಿನ ಬಹಳಷ್ಟು ಸಮಯವನ್ನು ಜಿಮ್ ನಲ್ಲಿ ವ್ಯಯಿಸುತ್ತಿದ್ದಾರಂತೆ. 2019 ರ ವಿಶ್ವಕಪ್ ನಲ್ಲೂ ಧೋನಿ ಆಡ್ತಾರೆ ಅನ್ನೋ ವಿಶ್ವಾಸ ಕೋಚ್ ಭಟ್ಟಾಚಾರ್ಯ ಅವರಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...