alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಆಸೆ ಈಡೇರಿಸ್ತಿದ್ದಾರೆ ಮಹೇಂದ್ರ ಸಿಂಗ್ ಧೋನಿ

ಪತ್ನಿ ಸಾಕ್ಷಿ ಆಸೆಯಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ಮುಂದೆ ಉತ್ತರಾಖಂಡ್ ನಲ್ಲಿಯೇ ಕೆಲಸ ಮಾಡಲಿದ್ದಾರೆ. ಧೋನಿ ಡೆಹ್ರಾಡೂನ್ ನಲ್ಲಿ ಫಾರ್ಮ್ ಹೌಸ್ ಮಾಡಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಕಾಲಾ ಗ್ರಾಮದಲ್ಲಿ ಜಮೀನು ನೋಡಿಯಾಗಿದೆ.

ಸಾಕ್ಷಿ ಕಾಲಾಗ್ರಾಮಕ್ಕೆ ಹೋಗಿ ಜಮೀನು ನೋಡಿ ಬಂದಿದ್ದಾರೆ. ಈ ಜಮೀನು ಸಾಕ್ಷಿ ತಾಯಿ ಹೆಸರಿನಲ್ಲಿದೆ ಎನ್ನಲಾಗ್ತಿದೆ. ಜಮೀನಿನಲ್ಲಿ ಬೆಳೆದಿದ್ದ ಪೊದೆಯನ್ನು ಕತ್ತರಿಸಲಾಗಿದೆ. ಸದ್ಯ ಧೋನಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ರಜೆಗಾಗಿ ಸಾಕ್ಷಿ ತಾಯಿ ಮನೆಗೆ ಬಂದಿದ್ದಾರೆ.

ರಜೆಯಲ್ಲಿ ತಾಯಿ ಮನೆಗೆ ಬರುವ ಸಾಕ್ಷಿ, ಪತಿ ಧೋನಿ ಇಲ್ಲಿಯೇ ಕೆಲಸ ಮಾಡಲಿ ಎಂದು ಬಯಸಿದ್ದಾರೆ. ಮಗಳು ಜೀವಾ ಹುಟ್ಟುಹಬ್ಬವನ್ನು ಕೂಡ ತಾಯಿ ಮನೆಯಲ್ಲಿಯೇ ಆಚರಿಸಿದ್ದಾರೆ ಸಾಕ್ಷಿ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...