alex Certify
ಕನ್ನಡ ದುನಿಯಾ       Mobile App
       

Kannada Duniya

ಮಹೇಂದ್ರ ಸಿಂಗ್ ಧೋನಿಗೆ 20 ಕೋಟಿ ರೂ. ಟೋಪಿ

MS Dhoni captain of Chennai Super King leave the ground after practice ahead of IPL match against Mumbai Indian at Wankhede on Friday. Express Photo by Prashant Nadkar. 09.05.2014. Mumbai.

ಮೋಸ ಹೋಗುವವರು ಇರುವವರೆಗೆ, ಮೋಸ ಮಾಡುವವರೂ ಇರುತ್ತಾರೆ. ಮುಗ್ಧರನ್ನು ಹೇಗೆಲ್ಲಾ ನಂಬಿಸಿ, ಮೋಸ ವಂಚನೆ ಮಾಡುವ ಹಲವಾರು ಘಟನೆಗಳು ನಿತ್ಯವೂ ವರದಿಯಾಗುತ್ತವೆ. ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಂಚನೆಯಾಗಿದೆ ಎನ್ನಲಾಗಿದೆ.

ಟೀಂ ಇಂಡಿಯಾ ಏಕದಿನ ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬರೋಬ್ಬರಿ 20 ಕೋಟಿ ರೂಪಾಯಿ ನೀಡದೇ ಸಂಸ್ಥೆಯೊಂದು ವಂಚಿಸಿದೆ. ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದಂತೆಯೇ ಜಾಹೀರಾತು ಲೋಕದಲ್ಲಿಯೂ ಶೈನ್ ಆಗಿದ್ದಾರೆ. ಅಲ್ಲದೇ ಅವರು, ಚೆನ್ನೈಸ್ ಎಫ್.ಸಿ. ಫುಟ್ಬಾಲ್ ತಂಡ ಮತ್ತು ರಾಂಚಿ ರೇಸ್ ಹಾಕಿ ತಂಡದ ಸಹ ಮಾಲೀಕರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ಸಾಲಿನಲ್ಲಿ ಸುಮಾರು 15 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಹೀಗೆ ದೋನಿ ಅವರೊಂದಿಗೆ, ಒಪ್ಪಂದ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಮೂಲದ ಸ್ಟಾರ್ಟನ್ ಸ್ಪೋರ್ಟ್ಸ್ 13 ಕೋಟಿ ರೂ.ಕೊಡಬೇಕಿತ್ತು. ಆದರೆ, ಕಂಪನಿ ಆರಂಭದಲ್ಲಿ 4 ಕಂತು ಪಾವತಿಸಿ ಸುಮ್ಮನಾಗಿದೆ. ಬಾಕಿ ಹಣ, ರಾಯಲ್ಟಿ ಸೇರಿ 20 ಕೋಟಿ ಕೊಡಬೇಕಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...