alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವ ಇಚ್ಛೆಯಿಂದ ನಾಯಕತ್ವ ತ್ಯಜಿಸಿಲ್ಲ ಧೋನಿ

ms-dhoni-of-india-and-virat-kohli-of-india-5

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ನಾಯಕತ್ವ ತ್ಯಜಿಸಿದ್ದು ಅಭಿಮಾನಿಗಳಿಗೆ ಬಹುದೊಡ್ಡ ಆಘಾತ ತಂದಿತ್ತು. ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದು ಅವರ ಸ್ವಯಂ ನಿರ್ಧಾರ ಅಂತಾನೇ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಧೋನಿ ಸ್ವಇಚ್ಛೆಯಿಂದ ನಾಯಕತ್ವ ತ್ಯಜಿಸಿಲ್ಲ, ಆಯ್ಕೆ ಸಮಿತಿಯ ಒತ್ತಾಯದ ಮೇರೆಗೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಭಾರೀ ಯಶಸ್ಸು ಗಳಿಸಿರುವ ವಿರಾಟ್ ಕೊಹ್ಲಿಗೆ ಏಕದಿನ ಹಾಗೂ ಟಿ-20 ನಾಯಕತ್ವವನ್ನೂ ನೀಡಬೇಕೆಂಬ ಪ್ರಯತ್ನ ಕಳೆದ ಸಪ್ಟೆಂಬರ್ ನಲ್ಲೇ ಶುರುವಾಗಿತ್ತು. ಸಪ್ಟೆಂಬರ್ 21 ರಂದು ಹೊಸ ಆಯ್ಕೆ ಸಮಿತಿ ನೇಮಕವೇ ಈ ಪ್ರಕ್ರಿಯೆಯ ಆರಂಭ.

2019 ರ ವಿಶ್ವಕಪ್ ಮೇಲೆ ಗಮನವಿಟ್ಟು ಐವರು ಸದಸ್ಯರ ಆಯ್ಕೆ ಸಮಿತಿ ಮುಂದೇನು ಮಾಡಬೇಕು ಎಂಬ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. 2019ರ ವೇಳೆಗೆ ಧೋನಿಗೆ 39 ವರ್ಷವಾಗಿರುತ್ತದೆ, ಹಾಗಾಗಿ ಕೊಹ್ಲಿಗೆ ನಾಯಕತ್ವ ವಹಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಸಮಿತಿ ಬಂದಿತ್ತು. ಜಾರ್ಖಂಡ್ ತಂಡದ ಮೆಂಟರ್ ಆಗಿ ಇತ್ತೀಚೆಗಷ್ಟೆ ನಾಗ್ಪುರದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಧೋನಿ ಪಾಲ್ಗೊಂಡಿದ್ರು.

ಅಲ್ಲಿ ಧೋನಿಯನ್ನು ಭೇಟಿ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಎಂ ಎಸ್ ಕೆ ಪ್ರಸಾದ್, ನಾಯಕತ್ವ ತ್ಯಜಿಸುವಂತೆ ಸೂಚಿಸಿದ್ದಾರೆ. ಅದನ್ನು ಒಪ್ಪಿಕೊಂಡ ಧೋನಿ ಕೂಡಲೇ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ರು. ಕೊಹ್ಲಿ ನೇತೃತ್ವದ ಟೆಸ್ಟ್ ತಂಡದಂತೆ, ಧೋನಿ ನಾಯಕತ್ವದ ಟೀಂ ಇಂಡಿಯಾ ಯಶಸ್ಸು ಗಳಿಸುತ್ತಿಲ್ಲ ಅನ್ನೋ ಮಾತುಗಳೂ ಕೇಳಿ ಬಂದಿತ್ತು. ಹಾಗಾಗಿ ಆಯ್ಕೆ ಸಮಿತಿ ಅವರನ್ನು ನಾಯಕ ಪಟ್ಟದಿಂದ ಕೆಳಗಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...