alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಅನುಪಸ್ಥಿತಿಯಲ್ಲಿ ಹೀಗೆ ನಡೀತು ಮಗಳ ಬರ್ತಡೇ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಇತ್ತ ಧೋನಿ ಮಗಳು ಜೀವಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. ಸಾಕ್ಷಿ ಮಗಳ ಹುಟ್ಟುಹಬ್ಬವನ್ನು ಡೆಹ್ರಾಡೂನ್ ನಲ್ಲಿ ಆಚರಿಸಿದ್ದಾರೆ.

ಜೀವಾ ಫೆಬ್ರವರಿ 6,2015 ರಂದು ಜನಿಸಿದ್ದು, ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ತನ್ನ ಅಜ್ಜಿ ಜೊತೆ ಜೀವಾಳ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀವಾ ಅಜ್ಜಿ ಜೊತೆ ಡೆಹ್ರಾಡೂನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆಂದು ಮೂಲಗಳು ಹೇಳಿವೆ.

ಧೋನಿ ಮಗಳ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ. ಹಿಂದಿನ ವರ್ಷ ಕೂಡ ಅಜ್ಜಿ ಮನೆ ಡೆಹ್ರಾಡೂನ್ ನಲ್ಲಿ ಜೀವಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಆಗ ಧೋನಿ ಉಪಸ್ಥಿತರಿದ್ದರು. ಈ ಬಾರಿಯೂ ಡೆಹ್ರಾಡೂನ್ ನಲ್ಲಿಯೇ ಬರ್ತ್ ಡೇ ಆಚರಿಸಿಕೊಂಡಿದ್ದಾಳೆ. ಧೋನಿ ಅತ್ತೆ-ಮಾವ ಡೆಹ್ರಾಡೂನ್ ನಲ್ಲಿದ್ದು, ಸಾಕ್ಷಿ ಅಮ್ಮನ ಜೊತೆ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಎರಡು ದಿನಗಳ ಕಾಲ ಮನೆಯಲ್ಲಿ ಪೂಜೆ ನಡೆದಿದೆ ಎಂದು ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...