alex Certify
ಕನ್ನಡ ದುನಿಯಾ       Mobile App
       

Kannada Duniya

ಕಬಾಲಿ ಸ್ಟೈಲಲ್ಲಿ ಕೂಲ್ ಕ್ಯಾಪ್ಟನ್ ಧೋನಿ

DHONI RAJANIಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಸಿನಿಮಾ ವಿಶ್ವದಾದ್ಯಂತ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಸ್ವತಃ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ‘ಕಬಾಲಿ’ಗೆ ಫಿದಾ ಆಗಿದ್ದಾರೆ.

‘ಕಬಾಲಿ’ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಭಿಮಾನಿಗಳೆಲ್ಲ ಡಿಫರೆಂಟಾಗಿ ರಜನಿಗೆ ಆಲ್ ದಿ ಬೆಸ್ಟ್ ಹೇಳಿದ್ರು. ಕೆಲವರು ಪೂಜೆ, ಪುನಸ್ಕಾರ ಅಂತಾ ಭಗವಂತನ ಮೊರೆ ಹೋದ್ರೆ ಇನ್ನು ಕೆಲವರು ಕುರಿ ಬಲಿ ಕೊಟ್ಟಿದ್ದೂ ಇದೆ. ಆದ್ರೆ ಧೋನಿ ‘ಕಬಾಲಿ’ ಸ್ಟೈಲ್ ಅನ್ನೇ ಅನುಕರಿಸೋ ಮೂಲಕ ರಜನಿಕಾಂತ್ ಗೆ ಗೌರವ ಸೂಚಿಸಿದ್ದಾರೆ. ಸೂಟು ಬೂಟು ತೊಟ್ಟು, ಕುರ್ಚಿ ಮೇಲೆ ಕುಳಿತು, ಗಲ್ಲಕ್ಕೆ ಕೈಕೊಟ್ಟು ಥೇಟ್ ‘ಕಬಾಲಿ’ ಯಲ್ಲಿ ರಜನಿಕಾಂತ್ ಪೋಸ್ ಕೊಟ್ಟಂತೆ ಧೋನಿ ಕೂಡ ಪೋಸ್ ಕೊಟ್ಟಿದ್ದಾರೆ.

ಈ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರೋ ಧೋನಿ, ತಲೈವಾ ಸ್ಟೈಲ್ ಕಾಪಿ ಮಾಡಲು ಟ್ರೈ ಮಾಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ. ಧೋನಿಯ ಹೊಸ ಸ್ಟೈಲ್ ಗೆ ಅಭಿಮಾನಿಗಳು ಕೂಡ ಜೈ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...