alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನ ಹೊಸ ಮನೆಯಲ್ಲಿ ಧೋನಿ ಕುಟುಂಬ

dhoni-family-twitter

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಾಣಿಜ್ಯ ನಗರಿ ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ. ಮುಂಬೈನ ಅಂಧೇರಿ ಏರಿಯಾದಲ್ಲಿ ಧೋನಿ ಸುಸಜ್ಜಿತ ಫ್ಲಾಟ್ ಒಂದನ್ನು ಕೊಂಡುಕೊಂಡಿದ್ದಾರೆ. ಕುಟುಂಬ ಸಮೇತ ಹೊಸ ಮನೆಗೆ ಶಿಫ್ಟ್ ಆಗಿದ್ದಾರಂತೆ.

ಧೋನಿ ಯಾವಾಗಲೂ ಆ ಬಿಲ್ಡಿಂಗ್ ನಲ್ಲಿರೋ ಜಿಮ್ ನಲ್ಲೇ ಕಾಲ ಕಳೆಯುತ್ತಾರಂತೆ. ಹಾಗಾಗಿ ಎಲ್ರೂ ಆ ಸೊಸೈಟಿಯನ್ನು ಧೋನಿ ಇರುವ ಬಿಲ್ಡಿಂಗ್ ಅಂತಾನೇ ಕರೆಯಲು ಶುರು ಮಾಡಿದ್ದಾರೆ. ಕಳೆದ ಬುಧವಾರ ಧೋನಿ ಭಾರತ ತಂಡದ ನಾಯಕತ್ವ ತ್ಯಜಿಸಿದ್ದರು.

ನಿನ್ನೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಧೋನಿ ನಾಯಕತ್ವದ ಕೊನೆಯ ಮ್ಯಾಚ್ ಆಗಿದ್ದು. ಈ ಪಂದ್ಯದಲ್ಲಿ ಧೋನಿ 40 ಬಾಲ್ ಗಳಿಗೆ 68 ರನ್ ಸಿಡಿಸಿದ್ದು ವಿಶೇಷ. ಅದರಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ ಕೂಡ ಇತ್ತು. ಭಾರತ ಕಂಡ ಶ್ರೇಷ್ಠ ನಾಯಕ ಎನಿಸಿರುವ ಧೋನಿ 2007 ರಲ್ಲಿ ಟಿ-20 ವಿಶ್ವಕಪ್, 2011 ರಲ್ಲಿ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...