alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿ ದಾಖಲೆಯ ಕಿರೀಟಕ್ಕೆ ಮತ್ತೊಂದು ಗರಿ…!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟಿ- 20 ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆಯನ್ನ ಬರೆದಿದ್ದಾರೆ. ಟಿ- 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ಗಳನ್ನ ಮಾಡಿದ ಕೀರ್ತಿಗೆ ಧೋನಿ ಭಾಜನರಾಗಿದ್ದಾರೆ.

ಪಾಕಿಸ್ತಾನದ ವಿಕೆಟ್ ಕೀಪರ್ ಅಕ್ಮಲ್ ಹೆಸರಿನಲ್ಲಿದ್ದ ದಾಖಲೆ ಈಗ ಎಂಎಸ್ಡಿ ಹೆಸರಿಗೆ ಶಿಫ್ಟ್ ಆಗಿದೆ. 91 ಪಂದ್ಯಗಳಲ್ಲಿ 32 ಸ್ಟಂಪ್ ಔಟ್ ಮಾಡಿದ ದಾಖಲೆ ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಹೆಸರಿನಲ್ಲಿತ್ತು. ಪಂದ್ಯದ ಆರಂಭಕ್ಕೂ ಮುನ್ನವೇ ಧೋನಿ 31 ಸ್ಟಂಪ್ ಔಟ್ ಮಾಡಿ ಎರಡನೇ ಸ್ಥಾನದಲ್ಲಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಬ್ಬರು ಆಟಗಾರರ ವಿಕೆಟ್ ಹಾರಿಸೋ ಮೂಲಕ ಧೋನಿ 91 ಪಂದ್ಯಗಳಲ್ಲಿ ಈ ದಾಖಲೆಯನ್ನ ಬರೆದಿದ್ದಾರೆ.

ಧೋನಿ , ಅಕ್ಮಲ್ ಹೊರತುಪಡಿಸಿದಂತೆ ಹೆಚ್ಚು ಸ್ಟಂಪ್ ಔಟ್ ಮಾಡಿದ ಸಾಲಿನಲ್ಲಿ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಷೆಹೆಜಾದಾ ಇದ್ದಾರೆ. ಟಿ- 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆಯೂ ಎಂಎಸ್ಡಿ ಹೆಸರಿನಲ್ಲಿದೆ. 49 ಕ್ಯಾಚ್ ಗಳೊಂದಿಗೆ ಧೋನಿ ಶಾರ್ಟೆಸ್ಟ್ ಕ್ರಿಕೆಟ್ ಫಾರ್ಮ್ ನಲ್ಲಿ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನ ಹೊಂದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಧೋನಿ 297 ಕ್ಯಾಚ್ ಗಳೊಂದಿಗೆ ನಾಲ್ಕನೆಯ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...