alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯಿಂದ ಯುವ ಜನತೆಗೆ ಸಿಗಲಿದೆ ಕಂಕಣ ಭಾಗ್ಯ….!

ಭಾರತ ಕ್ರಿಕೆಟ್ ತಂಡದ ಕೂಲ್ ಆಟಗಾರ ಎಂದೇ ಹೆಸರಾದ, ಯೂಥ್ ಐಕಾನ್ ಎಂದೇ ಬಿಂಬಿತವಾಗಿರುವ ಮಹೇಂದ್ರ ಸಿಂಗ್ ಧೋನಿ ಈಗ ಲಕ್ಷಾಂತರ ಜನರ ವಿವಾಹ ಮಾಡಿಸಲು ಮುಂದಾಗಿದ್ದಾರೆ!!!

ಅಂದರೆ, ಅವರೀಗ ಆನ್ ಲೈನ್ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ವೊಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಿಂದ ಸರಣಿಯಿಂದ ಹೊರಬಿದ್ದ ಕೂಡಲೇ ಈ ಆಫರ್ ಅನ್ನು ಧೋನಿ ಒಪ್ಪಿಕೊಂಡಿದ್ದಾರೆ.

ಮ್ಯಾಟ್ರಿಮೋನಿಯಲ್ ಬ್ರ್ಯಾಂಡ್ ಸಿಇಒ ಮುರುಗವೇಲ್ ಜಾನಕಿರಾಮನ್ ಮಾತನಾಡಿ, ಧೋನಿ ದೈವೀ ಕೊಡುಗೆ, ನಾಯಕತ್ವದ ಮೂಲಕ ಭಾರತ ತಂಡವನ್ನು ಚಾಣಾಕ್ಷತನದಿಂದ ಮುನ್ನಡೆಸಿಕೊಂಡು ಬಂದಿದ್ದ ಅವರು ಮಿಲಿಯನ್ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ನಾಯಕತ್ವ ಗುಣವೇ ಎಲ್ಲರೂ ಇಷ್ಟಪಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಧೋನಿ ಒಬ್ಬ ಉತ್ತಮ ಪತಿ ಹಾಗೂ ನೆಚ್ಚಿನ ಅಪ್ಪನಾಗಿ ಕರ್ತವ್ಯ ಪಾಲನೆ ಮಾಡುತ್ತಿದ್ದು, ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮುರುಗವೇಲ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧೋನಿ, ನಾನು ಲಕ್ಷಾಂತರ ಜೋಡಿಯ ವಿವಾಹ ಸಂಭ್ರಮಕ್ಕೆ ಬ್ರ್ಯಾಂಡ್ ಆಗುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...