alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯಕ್ಕೂ ಮುನ್ನ ಫುಟ್ಬಾಲ್ ಆಡಿದ ಧೋನಿ-ಕೊಹ್ಲಿ

ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸದಲ್ಲಿದೆ. ಮೊದಲ ಟಿ-20 ಪಂದ್ಯವನ್ನು ಗೆದ್ದಿರುವ ಭಾರತ ತಂಡ ಇಂದು ಸಂಜೆ ಐರ್ಲೆಂಡ್ ವಿರುದ್ಧ ಎರಡನೇ ಪಂದ್ಯವನ್ನಾಡಲಿದೆ. ಪಂದ್ಯಕ್ಕೂ ಮುನ್ನ ಆಟಗಾರರು ಭರ್ಜರಿ ಪ್ರಾಕ್ಟಿಸ್ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂ.ಎಸ್. ಧೋನಿ ಫುಟ್ಬಾಲ್ ಆಟದ ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಹಾಗೂ ಧೋನಿ ಟೀಂ ಸಿದ್ಧಪಡಿಸಿಕೊಂಡು ಫುಟ್ಬಾಲ್ ಆಡಿದ್ದಾರೆ. ಕೊಹ್ಲಿ ತಂಡ 4-2 ಅಂಕಗಳಿಂದ ಗೆಲುವು ಸಾಧಿಸಿದೆಯಂತೆ. ಪಂದ್ಯದ ಕಾಮೆಂಟ್ರಿಯನ್ನು ದಿನೇಶ್ ಕಾರ್ತಿಕ್ ನೀಡಿದ್ದಾರೆ.

ಪಂದ್ಯದ ಜೊತೆ ಆಟಗಾರರ ಕೆಲ ವಿಷ್ಯಗಳನ್ನು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕಾರ್ತಿಕ್ ಕಮೆಂಟ್ರಿ ಹೇಳ್ತಿದ್ದರೆ ಶಿಖರ್ ಧವನ್ ಮೈದಾನ ಸುತ್ತೆಲ್ಲ ಓಡಾಡಿ ಎಂಜಾಯ್ ಮಾಡ್ತಿದ್ದರು. ಧವನ್ ಇಂದು ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ ಮೈದಾನದಲ್ಲಿ ಮಸ್ತಿ ಮಾಡ್ತಿದ್ದಾರೆಂದು ಕಾರ್ತಿಕ್ ಹೇಳಿದ್ದಾರೆ.

ಮೊದಲ ಪಂದ್ಯಕ್ಕಿಂತ ಮೊದಲು ತೆಗೆದ ವಿಡಿಯೋ ಇದಾಗಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ಸೋಲಿಸಿರುವ ಟೀಂ ಇಂಡಿಯಾ ಇಂದು ಎರಡನೇ ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...