alex Certify
ಕನ್ನಡ ದುನಿಯಾ       Mobile App
       

Kannada Duniya

ಸಾನಿಯಾ ಮಿರ್ಜಾಗೆ ಇಷ್ಟವಂತೆ ಈ ಕ್ರಿಕೆಟರ್ಸ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ  ಕ್ರಿಕೆಟ್ ಅಭಿಮಾನಿ. ಅನೇಕ ಬಾರಿ ಕ್ರೀಡಾಂಗಣದಲ್ಲಿ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ ಸಾನಿಯಾ. ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ಮದುವೆಯಾಗಿರುವ ಭಾರತದ ಆಟಗಾರ್ತಿ ಮತ್ತೊಮ್ಮೆ ತಮಗೆ ಕ್ರಿಕೆಟ್ ಎಷ್ಟು ಇಷ್ಟ ಎಂಬುದನ್ನು ಹೇಳಿದ್ದಾರೆ.

ಟ್ವೀಟರ್ ಮೂಲಕ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಸಾನಿಯಾ ಉತ್ತರ ನೀಡಿದ್ದಾರೆ. ಅಭಿಮಾನಿಗಳು ಸಾನಿಯಾಗೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಸಮಯ ಹೊಂದಿಸಿಕೊಂಡು ಸಾನಿಯಾ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಸಾನಿಯಾ ತನಗಿಷ್ಟವಾಗುವ ಭಾರತದ ಕ್ರಿಕೆಟರ್ಸ್ ಯಾರು? ಶ್ರೀಲಂಕಾದ ಯಾವ ಆಟಗಾರ ಇಷ್ಟ? ಬಿಡುವಿನ ಸಮಯದಲ್ಲಿ ಏನೇನು ಮಾಡ್ತೇನೆ ಎಲ್ಲ ವಿಷ್ಯವನ್ನು ಟ್ವಿಟ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ ಹೇಳಿದಂತೆ ಕೊಹ್ಲಿ ಹಾಗೂ ಧೋನಿ ಸಾನಿಯಾಗೆ ಭಾರತದ ನೆಚ್ಚಿನ ಕ್ರಿಕೆಟ್ ಆಟಗಾರರಂತೆ. ಶ್ರೀಲಂಕಾದ ನೆಚ್ಚಿನ ಆಟಗಾರ ಕುಮಾರ್ ಸಂಗಕ್ಕಾರ ಎಂದ ಸಾನಿಯಾ, ಕೊಹ್ಲಿಗೆ ಚಾಂಪಿಯನ್ ಎಂದಿದ್ದಾರೆ. ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಏನೂ ಇಲ್ಲ ಎಂಬ ತಮಾಷೆ ಉತ್ತರ ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...