alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ–ಸಾಕ್ಷಿ ದಾಂಪತ್ಯಕ್ಕೆ 7 ವರ್ಷ

images

ಇಂದು ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮದುವೆ ವಾರ್ಷಿಕೋತ್ಸವ. ಧೋನಿ ಸಾಕ್ಷಿ ಕೈ ಹಿಡಿದು ಇಂದಿಗೆ 7 ವರ್ಷ ಕಳೆದಿದೆ. ಧೋನಿ ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಅಭಿಮಾನಿ ಬಳಗ ಧೋನಿ ಹಾಗೂ ಸಾಕ್ಷಿ ಜೋಡಿಗೆ ಶುಭಕೋರುತ್ತಿದೆ.

ಧೋನಿ ಹಾಗೂ ಸಾಕ್ಷಿಯದ್ದು ಪ್ರೇಮ ವಿವಾಹ. ದೊಡ್ಡವರಾದ ಮೇಲೆ ಇಬ್ಬರ ನಡುವೆ ಪ್ರೀತಿ ಚಿಗುರಿರಬಹುದು. ಆದ್ರೆ ಇಬ್ಬರೂ ಬಾಲ್ಯ ಸ್ನೇಹಿತರು. ಧೋನಿ ಹಾಗೂ ಸಾಕ್ಷಿ ರಾಂಚಿಯಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಎರಡೂ ಕುಟುಂಬಗಳ ನಡುವೆ ಸಂಬಂಧ ಚೆನ್ನಾಗಿತ್ತು. ಇಷ್ಟೇ ಅಲ್ಲ ಇಬ್ಬರು ಒಂದೇ ಸ್ಕೂಲ್ ನಲ್ಲಿ ಓದಿದ್ದರು.

ನಂತ್ರ ಸಾಕ್ಷಿ ಕುಟುಂಬ ಡೆಹ್ರಾಡೂನ್ ಗೆ ಶಿಫ್ಟ್ ಆಗಿತ್ತು. ಆ ನಂತ್ರ ಧೋನಿ ಹಾಗೂ ಸಾಕ್ಷಿ ಭೇಟಿಯಾಗಿರಲಿಲ್ಲ. ಯಾವುದೆ ಕಾಂಟೆಕ್ಟ್ ಇರಲಿಲ್ಲ. ಸ್ವರ್ಗದಲ್ಲಿಯೇ ಇಬ್ಬರ ಮದುವೆ ನಿಶ್ಚಯವಾಗಿತ್ತು. ಹಾಗಾಗಿಯೇ ಮತ್ತೆ ಧೋನಿ-ಸಾಕ್ಷಿ ಭೇಟಿಯಾದ್ರು. ಧೋನಿ ಹಾಗೂ ಸಾಕ್ಷಿ ಕೊಲ್ಕತ್ತಾದ ತಾಜ್ ಬಂಗಾಳ ಹೊಟೇಲ್ ನಲ್ಲಿ 2007ರಲ್ಲಿ ಭೇಟಿಯಾದ್ರು.

ಟೀಂ ಇಂಡಿಯಾ ಇದೇ ಹೊಟೇಲ್ ನಲ್ಲಿ ತಂಗಿತ್ತು. ಸಾಕ್ಷಿ ಕೂಡ ಇದೇ ಹೊಟೇಲ್ ನಲ್ಲಿದ್ದರು. ಸಾಕ್ಷಿ ಮ್ಯಾನೇಜರ್ ಇಬ್ಬರನ್ನು ಭೇಟಿ ಮಾಡಿಸಿದ್ದರು. ಧೋನಿ ಭೇಟಿಯಾದ ದಿನವೇ ಸಾಕ್ಷಿ ಹೊಟೇಲ್ ನಿಂದ ಹೊರಡಬೇಕಿತ್ತು. ಇಂಟರ್ನ್ ಮುಗಿಸಿ ಸಾಕ್ಷಿ ಹೊಟೇಲ್ ಬಿಟ್ಟ ನಂತ್ರ ಧೋನಿ ಮ್ಯಾನೇಜರ್ ರಿಂದ ನಂಬರ್ ಪಡೆದು ಸಾಕ್ಷಿಗೆ ಫೋನ್ ಮಾಡಿದ್ದರಂತೆ. ಸಾಕ್ಷಿ ಮೊದಲು ಇದು ತಮಾಷೆ ಎಂದುಕೊಂಡಿದ್ದರು. ನಂತ್ರ ಇಬ್ಬರ ನಡುವೆ ಮಾತುಕತೆ ಶುರುವಾಗಿದೆ.

2008ರಲ್ಲಿ ಧೋನಿ ಬರ್ತ್ ಡೇಗೆ ಸಾಕ್ಷಿ ಬಂದಿದ್ದರು. ಜುಲೈ 3, 2010ರಂದು ಧೋನಿ ಹಾಗೂ ಸಾಕ್ಷಿ ಎಂಗೇಜ್ಮೆಂಟ್ ಡೆಹ್ರಾಡೂನ್ ನಲ್ಲಿ ನಡೆಯಿತು. ನಂತ್ರ ಜುಲೈ , 2010ರಂದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೆಬ್ರವರಿ 6, 2015ರಂದು ಧೋನಿ ಹಾಗೂ ಸಾಕ್ಷಿ ಮುದ್ದು ಮಗುವಿನ ಪಾಲಕರಾಗಿದ್ದಾರೆ. ಧೋನಿಗಿಂತ ಸಾಕ್ಷಿ 7 ವರ್ಷ ಚಿಕ್ಕವಳು. ಧೋನಿಗೆ ಈಗ 35 ವರ್ಷ ವಯಸ್ಸು. ಸಾಕ್ಷಿ ವಯಸ್ಸು 28.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...