alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೇಯಸ್ ಅಯ್ಯರ್ ಗೆ ಧೋನಿ ನೀಡಿದ ಸಲಹೆಯೇನು ಗೊತ್ತಾ?

ಟೀಮ್‍ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರಿಗೆ ಉಪಯುಕ್ತ ಟಿಪ್ಸ್ ನೀಡ್ತಾ ಇರ್ತಾರೆ. ಯಂಗ್ ಪ್ಲೇಯರ್ಸ್, ತಾವು ಟೀಮ್‍ ಇಂಡಿಯಾಗೆ ಎಂಟ್ರಿ ನೀಡಿದ ಮೇಲೆ ಮಾಹಿ ಹೇಳಿದ ಮಾತುಗಳನ್ನು ಮೆಲುಕು ಹಾಕುವುದು ಉಂಟು.

ಶ್ರೇಯಸ್ ಅಯ್ಯರ್….ಸದ್ಯ ಟೀಮ್‍ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಟಗಾರ. ಐಪಿಎಲ್ ಹಾಗೂ ದೇಶಿಯ ಟೂರ್ನಿಯಲ್ಲಿ ತನ್ನ ಕ್ಲಾಸ್ ಬ್ಯಾಟಿಂಗ್ ಪ್ರದರ್ಶನದಿಂದಲೇ ಅಭಿಮಾನಿಗಳ ಮನ ಗೆದ್ದ ಪ್ಲೇಯರ್. ಶ್ರೇಯಸ್ ಅಯ್ಯರ್ ಗೆ, ಕೂಲ್ ಕ್ಯಾಪ್ಟನ್ ಸುದ್ದಿ ಪತ್ರಿಕೆಗಳು ಓದದಂತೆ ಮತ್ತು ಸಾಮಾಜಿಕ ಮಾಧ್ಯಮದಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದ್ದರಂತೆ.

ಈ ಬಗ್ಗೆ ಇತ್ತೀಚಿಗೆ ತುಟಿ ಬಿಚ್ಚಿರುವ ಶ್ರೇಯಸ್, ಧೋನಿ ಸಾಮಾಜಿಕ ತಾಣ ಹಾಗೂ ಮಾಧ್ಯಮದಿಂದ ದೂರ ಇರುವಂತೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ. ಶ್ರೇಯಸ್ ಐಪಿಎಲ್ ನಲ್ಲಿ ಆಯ್ಕೆ ಆದ ಮೇಲೆ, ಪರಿಚಿತ ಹುಡುಗಿಯ ನಡುವಳಿಕೆ ಬದಲಾಯಿತು. ಆ ಯುವತಿ ಹಣಕ್ಕಾಗಿ ನನ್ನ ಹಿಂದೆ ಬಿದ್ದಿದ್ದಳು. ನಿರಂತರ ಸಂಪರ್ಕಿಸಲು ಪ್ರಯತ್ನಿಸಿದ್ದಳು ಎಂದು ಹೇಳಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ 2018ರಲ್ಲಿ ಆಡಿದ 14 ಪಂದ್ಯಗಳಲ್ಲಿ 411 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...