alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಖಲೆಯನ್ನು ಮುಡಿಗೇರಿಸಿಕೊಂಡ ಧೋನಿ

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಹತ್ತು ಹಲವು ದಾಖಲೆಗಳಿಗೆ ಭಾಜನರಾಗಿದ್ದಾರೆ. ಬುಧವಾರದಂದು ದಕ್ಷಿಣ ಅಫ್ರಿಕಾ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಈಗ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿರುವ ಧೋನಿ ಈ ಪಂದ್ಯದಲ್ಲಿ Aiden Markram ರನ್ನು ಸ್ಟಂಪ್ ಮಾಡುವ ಮೂಲಕ ಏಕ ದಿನ ಪಂದ್ಯಗಳಲ್ಲಿ 400 ಸ್ಟಂಪ್ ಔಟ್ ಮಾಡಿದ ನಾಲ್ಕನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತಿ ಹೆಚ್ಚು ಸ್ಟಂಪ್ ಮಾಡಿದ ವಿಕೆಟ್ ಕೀಪರ್ ಗಳ ಪೈಕಿ ಕುಮಾರ ಸಂಗಕ್ಕಾರ (482) ಮೊದಲನೇ, ಆಡಂ ಗಿಲ್ ಕ್ರಿಸ್ಟ್  (472) ಎರಡನೇ ಹಾಗೂ ಮಾರ್ಕ್ ಬೌಚರ್ (424) ಮೂರನೇ ಸ್ಥಾನದಲ್ಲಿದ್ದು, 400 ಸ್ಟಂಪ್ ಮಾಡುವ ಮೂಲಕ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕೇಪ್ ಟೌನ್ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ಬುಧವಾರದಂದು ನಡೆದ ದಕ್ಷಿಣ ಅಫ್ರಿಕಾ ವಿರುದ್ದದ 3 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 124 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...