alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಲಿಗೆ ಗುರಿಯಾಗಿದೆ ಈಗ ಮತ್ತೊಂದು ರನೌಟ್

ಕ್ರಿಕೆಟ್ ಜಗತ್ತಿನಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ದಾಖಲೆಯಾಗುವುದು‌ ಹಾಗೂ ಅತಿ‌ ಕೆಟ್ಟದಾಗಿ‌ ಔಟ್ ಆಗುವುದು ಸರ್ವೇ ಸಾಮಾನ್ಯ. ಇದೇ ರೀತಿ ಒಟಾಗೋ‌ ತಂಡದ ಆಟಗಾರರು ರನ್ ಔಟ್ ಆಗಿರುವುದು ಮತ್ತೊಮ್ಮೆ ಸುದ್ದಿಯಾಗಿದೆ.

ಕೆಲ ದಿನಗಳ ‌ಹಿಂದಷ್ಟೆ ಪಾಕಿಸ್ತಾನದ ಅಜರ್ ಆಲಿ, ಬೌಂಡರಿ ದಾಟಿದೆ ಎಂದು ಭಾವಿಸಿ‌ ಪಿಚ್ ಮಧ್ಯೆ ಮಾತನಾಡುವಾಗ, ರನೌಟ್ ಆಗಿದ್ದ ವಿಡಿಯೊ ಮಾಸುವ ಮೊದಲೇ, ಮತ್ತೊಂದು ಹಾಸ್ಯಾಸ್ಪದ ರೀತಿಯಲ್ಲಿ ನ್ಯೂಜಿಲೆಂಡ್ ನ ದೇಶಿ ಪಂದ್ಯದಲ್ಲಿ ನಡೆದಿದೆ.

ಒಟಾಗೋ ವೋಲ್ಟ್ಸ್ ತಂಡದ ನಾಥನ್ ಸ್ಮಿತ್ ಹಾಗೂ ಮೈಕಲ್‌ ರಿಪ್ಪನ್ ಬ್ಯಾಟಿಂಗ್ ಮಾಡುವಾಗ,‌ ಎರಡನೇ ರನ್ ಕದಿಯುವ ವೇಳೆ, ನಾನ್ ಸ್ಟ್ರೈಕ್ ನಲ್ಲಿದ್ದ ರಿಪ್ಪನ್ ಜಾರಿ ಬಿದ್ದಿದ್ದಾರೆ. ಬಳಿಕ ರಿಪ್ಪನ್ ಬಿದ್ದಿದ್ದನ್ನು ನೋಡಿದ ಸ್ಮಿತ್ ವಾಪಾಸಾಗಲು ಮುಂದಾದಾಗ ಅವರು‌ ಜಾರಿ ಬೀಳುವ ಮೂಲಕ ಸುಲಭದ ರನ್ಔಟ್ ಆಗಿದ್ದಾರೆ.

ವಾರದಲ್ಲಿಯೇ ಎರಡನೇ ಬಾರಿ ಕ್ರಿಕೆಟ್ ಜಗತ್ತಿನಲ್ಲಿ ಈ ರೀತಿಯ ಕೆಟ್ಟ ರನ್ಔಟ್ ಆಗಿರುವುದು‌ ಸಾಮಾಜಿಕ‌ ಜಾಲತಾಣದಲ್ಲಿ ಬಿಸಿ ಬಿಸಿ ಸುದ್ದಿಯಾಗಿದ್ದು, ಸ್ಮಿತ್ ರನ್ ಔಟ್ ಆಗಿರುವ ದೃಶ್ಯ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...