alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಆಟಗಾರನಿಗೆ ಸಿಕ್ಕಿದೆ 1 ಮಿಲಿಯನ್ ಡಾಲರ್ ನಿಧಿ…!

ಬೆಲ್ಜಿಯಂನ ಫುಟ್ಬಾಲ್ ಆಟಗಾರ ಮೌಸಾ ಡೆಂಬೆಲೆಯನ್ನು ಅದೃಷ್ಟವೇ ಅರಸಿ ಬಂದಿದೆ. ಹೊಸ ಹೋಟೆಲ್ ನ ನೆಲಮಾಳಿಗೆಯಲ್ಲಿ 1 ಮಿಲಿಯನ್ ಡಾಲರ್ ಮೌಲ್ಯದ ನಿಧಿ ಪತ್ತೆಯಾಗಿದೆ. ತಮ್ಮ ಹುಟ್ಟೂರು ಆಂಟ್ವರ್ಪ್ ನಲ್ಲಿ ಮೌಸಾ ಹೊಸ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ. ಇದಕ್ಕೆ ಡೆ ಗುಲ್ಡೆ ಶೋಯೆನ್ ಅಂತಾ ಹೆಸರಿಡಲಾಗಿದೆ.

700 ವರ್ಷಗಳ ಇತಿಹಾಸವಿರೋ ಆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೂ ಮುನ್ನ ಒಮ್ಮೆ ಪರಿಶೀಲನೆ ನಡೆಸುವಂತೆ ಮೌಸಾ ಪುರಾತತ್ವ ತಜ್ಞರಿಗೆ ಸೂಚಿಸಿದ್ದರು. ಈ ವೇಳೆ 18ನೇ ಶತಮಾನದ ಪಿಂಗಾಣಿ, ಗಾಜು, ಮಣ್ಣಿನ ಪಾತ್ರೆಗಳು, ಮತ್ತು ಟೇಬಲ್ ವೇರ್ ಸಿಕ್ಕಿತ್ತು.

ಹೀಗೆ ಅಗೆಯುತ್ತಾ ಹೋದಂತೆ 1 ಮಿಲಿಯನ್ ಡಾಲರ್ ಮೌಲ್ಯದ ನಿಧಿ ಪತ್ತೆಯಾಗಿದೆ. ಈ ಆಸ್ತಿಗೆ ಮೌಸಾ ಸಹೋದರಿ ಕೂಡ ಮಾಲೀಕಳಾಗಿದ್ದಾಳೆ. ಹಾಗಾಗಿ ನಿಧಿಯಲ್ಲಿ ಆಕೆಗೂ ಪಾಲು ಸಿಗಬಹುದು. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಹೋಟೆಲ್ ಇದ್ದಿರಬಹುದು ಅಂತಾ ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...