alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ವಿಡಿಯೋ ಪೋಸ್ಟ್ ಮಾಡಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾರ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತಲ್ಲದೆ ನೆಟ್ಟಿಗರಿಂದ ತರಹೇವಾರಿ ಕಮೆಂಟ್ ಗಳು ಕೇಳಿ ಬಂದಿದ್ದವು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುವ ವೇಳೆ ಐಷಾರಾಮಿ ಕಾರಿನಲ್ಲಿ ಸಾಗುತ್ತಿದ್ದವರೊಬ್ಬರು ರಸ್ತೆಯ ಮೇಲೆ ಕಸ ಎಸೆದಿದ್ದು, ಇದು ಅನುಷ್ಕಾ ಶರ್ಮಾರನ್ನು ಕೆರಳಿಸಿತ್ತಲ್ಲದೆ ಕಾರಿನ ಕಿಟಕಿಯಿಂದಲೇ ಅವರುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನು ರೆಕಾರ್ಡ್ ಮಾಡಿದ್ದ ವಿರಾಟ್ ಕೊಹ್ಲಿ, ಇದನ್ನು ಶೇರ್ ಮಾಡಿದ್ದು ಟ್ರೋಲ್ ಗೂ ತುತ್ತಾಗಿತ್ತು.

ಇದರಿಂದ ಬೇಸತ್ತ ವಿರಾಟ್ ಕೊಹ್ಲಿ, ಸಾಮಾಜಿಕ ಕಾರ್ಯಗಳನ್ನು ಮಾಡಲು ಕೆಲವರಿಗೆ ಧೈರ್ಯವಿಲ್ಲ. ಮಾಡಿದವರನ್ನೂ ಸಹಿಸುವ ಸಹನೆ ಇಲ್ಲವೆಂಬ ಅರ್ಥದ ಪೋಸ್ಟ್ ಹಾಕಿದ್ದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ರಸ್ತೆಯಲ್ಲಿ ಕಸ ಎಸೆಯುವ ಮೂಲಕ ವಿಡಿಯೋದಲ್ಲಿ ಸೆರೆಯಾಗಿದ್ದ ಅರ್ಹಾನ್ ಸಿಂಗ್ ಪೋಸ್ಟ್ ಒಂದನ್ನು ಹಾಕಿದ್ದು, ರಸ್ತೆಯಲ್ಲಿ ಕಸ ಎಸೆದಿದ್ದ ತನ್ನ ತಪ್ಪಿಗೆ ಕ್ಷಮೆ ಯಾಚಿಸುತ್ತಲೇ, ಬೀದಿಯಲ್ಲಿ ನಿಂತು ಕೂಗುವಂತೆ ನೀವು ನನಗೆ ಹೇಳಿದ್ದು ಎಷ್ಟು ಸರಿ ಎಂದು ಅನುಷ್ಕಾ ಶರ್ಮಾರನ್ನು ಪ್ರಶ್ನಿಸಿದ್ದಾರೆ. ಆಕಸ್ಮಿಕವಾಗಿ ನನ್ನ ಕಾರಿನಿಂದ ಕಸ ಹಾರಿ ಹೋಗಿದೆ ಎಂದಿರುವ ಅರ್ಹಾನ್ ಸಿಂಗ್, ಅದಕ್ಕಿಂತ ಕೆಟ್ಟದಾಗಿತ್ತು ನಿಮ್ಮ ನಡತೆ ಎಂದಿದ್ದಾರೆ.

ಇನ್ನು ಅರ್ಹಾನ್ ಸಿಂಗ್ ಅವರ ತಾಯಿ ಗೀತಾಂಜಲಿ, ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದು, ಪ್ರಚಾರ ಪಡೆಯಲು ನನ್ನ ಮಗನನ್ನು ಬಲಿಪಶು ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಶೇರ್ ಮಾಡಿರೋ ವಿಡಿಯೋದಲ್ಲಿ ನನ್ನ ಮಗನ ಮುಖವನ್ನು ಮರೆಮಾಚದೆ ಹಾಕಲು ನಿಮಗೆ ಎಷ್ಟು ಧೈರ್ಯ ಎಂದಿರುವ ಗೀತಾಂಜಲಿ, ಪರಿಸರದ ಬಗ್ಗೆ ನಿಮಗೆ ಅಷ್ಟು ಕಾಳಜಿ ಇದ್ದರೆ ಮೊದಲು ನಿಮ್ಮ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ನಿಗಾ ವಹಿಸಿ ಎಂದು ಗುಡುಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಳಿಕ ತಾವು ವಿಡಿಯೋ ಹಾಕಿರುವ ಕುರಿತು ಕೊಹ್ಲಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...