alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಸೊನ್ನೆಗೆ ಇಡೀ ತಂಡವೇ ಆಲೌಟ್ !!

zero600_1455264475

ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಸೊನ್ನೆ ರನ್ನಿಗೆ ಇಡೀ ತಂಡವೇ ಆಲೌಟ್ ಆಗುವ ಮೂಲಕ ಆಟಗಾರರು ನಗೆಪಾಟಲಿಗೀಡಾಗುವ ಜೊತೆಗೆ ದಾಖಲೆ ನಿರ್ಮಿಸಿದ ಕೀರ್ತಿ(?) ಗೂ ಪಾತ್ರರಾಗಿದ್ದಾರೆ.

ಹೌದು. ಇಂತದೊಂದು ಅಪರೂಪದಲ್ಲಿ ಅಪರೂಪ ಎನ್ನಬಹುದಾದ ದಾಖಲೆಯನ್ನು ಇಂಗ್ಲೆಂಡಿನ ಬ್ಯಾಪ್ ಚೈಲ್ಡ್ ತಂಡ ಮಾಡಿದೆ. ಕೆಂಟ್ ಬರಿಯಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೈಸ್ಟ್ ಚರ್ಚ್ ವಿರುದ್ದದ ಪಂದ್ಯದಲ್ಲಿ ಬ್ಯಾಪ್ ಚೈಲ್ಡ್ ನ ಎಲ್ಲ ಆಟಗಾರರೂ ಶೂನ್ಯ ಸಂಪಾದನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಉಭಯ ತಂಡದಿಂದ ತಲಾ ಆರು ಮಂದಿ ಆಟಗಾರರಿದ್ದರು.

ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಕ್ರೈಸ್ಟ್ ಚರ್ಚ್ ತಂಡ 120 ರನ್ ಗಳ ಸವಾಲನ್ನು ಬ್ಯಾಪ್ ಚೈಲ್ಡ್ ತಂಡಕ್ಕೆ ನೀಡಿತ್ತು. ಬ್ಯಾಟಿಂಗ್ ಗೆ ಇಳಿದ ಎಲ್ಲ ಆರು ಮಂದಿ ಆಟಗಾರರು ಕೇವಲ 20 ಎಸೆತಗಳಲ್ಲಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಗೆ ಮರಳಿದ್ದಾರೆ. ಈ ಹಿಂದೆ ಎರಡು ಬಾರಿ ಇಡೀ ತಂಡ ಶೂನ್ಯಕ್ಕೆ ಔಟ್ ಆಗಿದ್ದ ಇತಿಹಾಸವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...